ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಡೆದಾಟ ಪ್ರಕರಣದ ಆರೋಪಿ 46 ವರ್ಷದ ಬಳಿಕ ಬಂಧನ!!

ಕಾರವಾರ: ಕಳೆದ 46 ವರ್ಷದ ಹಿಂದೆ ಹೊಡೆದಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸುವಲ್ಲಿ ಅಂತೂ ಯಶಸ್ವಿಯಾಗಿದ್ದಾರೆ.

ಭಟ್ಕಳ ತಾಲೂಕಿನ ಬೆಳಕೆ ನಿವಾಸಿ ಈಶ್ವರ ನಾಯ್ಕ ಬಂಧಿತ ಆರೋಪಿ. 1975ರಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ 10 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ದೋಷಿಗಳೆಂದು ತೀರ್ಪು ನೀಡಿತ್ತು.

ಇದರಲ್ಲಿಯ ಆರೋಪಿ ಸಂಖ್ಯೆ 8ನೇಯವರಾಗಿದ್ದ ಈಶ್ವರ ನಾಯ್ಕ, ವಿಚಾರಣಾ ಸಮಯದಿಂದ ತಲೆಮರೆಸಿಕೊಂಡಿದ್ದ. ಆದರೆ ಈತ ಭಟ್ಕಳ ಸೊಸೈಟಿಯೊಂದರಲ್ಲಿ ಲೋನ್ ಪಡೆದಿರುವ ಆಧಾರದ ಮೇಲೆ ಈತನ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Edited By : Nagaraj Tulugeri
PublicNext

PublicNext

06/09/2022 01:19 pm

Cinque Terre

23.62 K

Cinque Terre

0

ಸಂಬಂಧಿತ ಸುದ್ದಿ