ಶ್ರೀನಗರ: ಸ್ವಾತಂತ್ರ್ಯೋತ್ಸವ ದಿನವೂ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಉಪಟಳ ನಡೆಸಿದ್ದಾರೆ. ಎರಡು ಕಡೆಗಳಲ್ಲಿ (ಶ್ರೀನಗರದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಹಾಗೂ ಬುದ್ಗಾಮ್ ಜಿಲ್ಲೆಯ ಗೋಪಾಲಪೋರ ಗ್ರಾಮದಲ್ಲಿ) ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಗಾಯಗೊಂಡಿದ್ದಾರೆ.
ಗೋಪಾಲಪೋರ ಗ್ರಾಮದಲ್ಲಿ ದಾಳಿಯಲ್ಲಿ ನಾಗರಿಕ ಕರಣ್ ಸಿಂಗ್ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
PublicNext
16/08/2022 06:53 am