ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಮತ್ತೊಬ್ಬ ಶಂಕಿತ ಭಯೋತ್ಪಾದಕ ಬಂಧನ

ಬೆಂಗಳೂರು: ನಿನ್ನೆ ರವಿವಾರ ತಡರಾತ್ರಿ ಶಂಕಿತ ಉಗ್ರನೊಬ್ಬ ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ. ಆಗಿನಿಂದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಈಗ ಮತ್ತೊಬ್ಬ ಶಂಕಿತ ಭಯೋತ್ಪಾದಕ ಸೆರೆ ಸಿಕ್ಕಿದ್ದು ರಾಜಧಾನಿಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.

ಅಕ್ತರ್ ಹುಸೇನ್ ಜತೆ ನಿರಂತರ ಸಂಪರ್ಕದಲ್ಲಿದ್ದ ಮತ್ತೊಬ್ಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಒಂದೇ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಜುಬಾ ಎಂಬ ಮತ್ತೊಬ್ಬ ಶಂಕಿತ ಉಗ್ರನನ್ನ ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಜುಬಾ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ವಾಟ್ಸ್ಆ್ಯಪ್ ಹಾಗು ಟೆಲಿಗ್ರಾಮ್ ಗ್ರುಪ್ ಮೂಲಕ ಇಸ್ಲಾಂ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಇತರರನ್ನು ಪ್ರೇರೇಪಿಸುತ್ತಿದ್ದ. ಸದ್ಯ ಸಿಸಿಬಿ ಪೊಲೀಸರು ಈತನ ಜಾಲದ ಬಗ್ಗೆ ಶೋಧಿಸುತ್ತಿದ್ದಾರೆ.

Edited By :
PublicNext

PublicNext

25/07/2022 07:29 pm

Cinque Terre

49.19 K

Cinque Terre

7