ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಲ್ ನಲ್ಲಿ ನಮಾಜ್ ನಾಲ್ವರು ಅರೆಸ್ಟ್

ಲಖನೌ: ಲಕ್ನೋದ ಲುಲು ಮಾಲ್ ನಲ್ಲಿ ಅನಧೀಕೃತ ರೀತಿಯಲ್ಲಿ ನಮಾಜ್ ಮಾಡಿದ ಆರೋಪದ ಮೇರೆಗೆ ಉತ್ತರ ಪ್ರದೇಶ ಪೊಲೀಸರು ನಾಲ್ವರನ್ನು ಮಂಗಳವಾರ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಇದೇ ಪ್ರಕರಣದಲ್ಲಿ ಇನ್ನೂ ನಾಲ್ವರು ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿಗಳು ಮಾಲ್ ನ ಸಿಬ್ಬಂದಿಗಳಲ್ಲ ಲಖನೌ ನಿವಾಸಿಗಳಾಗಿದ್ದಾರೆ ಎಂದು ಲಖನೌ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಂತಹ ವಾತಾವರಣ ಹದಗೆಡಿಸುವ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಈ ಮಾಲ್ ನಲ್ಲಿ ಶೇ. 80 ರಷ್ಟು ಸಿಬ್ಬಂದಿ ಹಿಂದೂಗಳಾಗಿದ್ದಾರೆ ಎಂದು ಮಾಲ್ ನ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. ಮಾಲ್ ನಲ್ಲಿ ನಮಾಜ್ ಗೆ ಆಕ್ಷೇಪವೆತ್ತಿದ್ದ ಹಿಂದೂ ಸಂಘಟನೆಗಳು, ಹನುಮಾನ್ ಚಾಲಿಸಾ ನಡೆಸಲು ಅನುಮತಿ ಕೋರಿದ ನಂತರ ಈ ಘಟನೆ ವಿವಾದವಾಗಿ ರೂಪುಗೊಂಡಿತ್ತು.

Edited By : Nirmala Aralikatti
PublicNext

PublicNext

20/07/2022 09:16 am

Cinque Terre

34.81 K

Cinque Terre

21