ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹತ್ಯೆಯ ಘಟನೆ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದೆ. ಹಾಡಹಗಲೇ ಟೈಲರ್ ಶಾಪ್‌ಗೆ ನುಗ್ಗಿದ ರಾಕ್ಷಸರು ಟೈಲರ್ ಕನ್ಹಯ್ಯಲಾಲ್ ಅವರನ್ನು ಅತ್ಯಂತ ಅಮಾನುಷವಾಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದ ನೂಪುರ್ ಶರ್ಮ ಪರವಾಗಿ ವ್ಯಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದ ಕಾರಣಕ್ಕಾಗಿ ಈ ಬರ್ಬರ ಹತ್ಯೆ ಮಾಡಲಾಗಿದೆ. ಮೂಲಗಳ ಪ್ರಕಾರ ಅಪ್ಪನ ಮೊಬೈಲ್‌ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ನೂಪುರ್ ಶರ್ಮ ಪರವಾದ ಪೋಸ್ಟ್ ಹಾಕಿದ್ದು ಅವರ 8 ವರ್ಷದ ಪುತ್ರ ಎನ್ನುವ ಮಾಹಿತಿ ಬಹಿರಂಗವಾಗಿದೆ. ಆದರೆ, ಪಾತಕಿಗಳು ಅಪ್ಪನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ರಾಜಸ್ಥಾನ ಪೊಲೀಸರು ರಾಜ್ಸಾಮಂಡ್‌ನ ಭೀಮ್ ಪ್ರದೇಶದಿಂದ ಆರೋಪಿಗಳಾದ ಮೊಹಮದ್ ರಿಯಾಜ್ ಹಾಗೂ ಮೊಹಮದ್ ಗೌಸ್‌ನನ್ನು ಬಂಧಿಸಿದ್ದಾರೆ.
PublicNext
29/06/2022 11:33 am