ಬೆಂಗಳೂರು: ಪಿಎಸ್ ಐ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ಅಧಿಕಾರಿಗಳು ಸಿಬ್ಬಂದಿಗಳಿಗೆ ಡಿಪಾರ್ಟ್ಮೆಂಟ್ ಎನ್ಕೌರಿ ಮುಳುವಾಗೋ ಸಾಧ್ಯತೆಯಿದೆ. ಈಗಾಗಲೆ ಕಾನ್ಸ್ ಟೇಬಲ್ ರಿಂದ ಡಿವೈ ಎಸ್ಪಿಯವರೆಗೂ ಪಿಎಸ್ ಐ ಹಗರಣದಲ್ಲಿ ಬಂಧನವಾಗಿದ್ದಾರೆ. ಸಿಐಡಿ ಒಂದು ಕಡೆ ತನಿಖೆ ನಡೆಸ್ತಿದ್ರೆ ಮತ್ತೊಂದು ಕಡೆ ಆರೋಪಿತರ ವಿರುದ್ಧ ಇಲಾಳೆ ತನಿಖೆ ಕೂಡ ನಡೆಯುತ್ತಿದೆ.
ಇನ್ನು ಪಿಎಸ್ ಐ ಪ್ರಕರಣದ ಚಾರ್ಜ್ ಶೀಟ್ ಜುಲೈನಲ್ಲಿ ಸಲ್ಲಿಸಲಾಗುತ್ತದೆ. ಚಾರ್ಜ್ ಶೀಟ್ ಸಲ್ಲಿಸಿದ ಬಳಿ ಪೊಲೀಸ್ ಇಲಾಖೆಯ ಅಸಲಿ ಆಟ ಶುರುವಾಗಲಿದೆ. ಈಗಾಗಲೇ ಕ್ರಿಮಿನಲ್ ಆಕ್ಟ್ ನಡಿ ಸಿಐಡಿ ತನಿಖೆ ನಡೆಸುತ್ತಿದ್ದು ಸ್ಕ್ಯಾಂನಲ್ಲಿ ಭಾಗಿಯಾಗಿರುವ 18 ಜನರ ಅಕ್ರಮದ ಬಗ್ಗೆ ಸಾಕಷ್ಟು ಸಾಕ್ಷಿಗಳನ್ನ ಕಲೆ ಹಾಕಿದೆ. ಹೀಗಾಗಿ ಆ ಸಾಕ್ಷಿಗಳ ಅನ್ವಯ ಇಲಾಖಾ ತನಿಖೆ ನಡೆಸಲಾಗುತ್ತದೆ.
ಇನ್ನು ಈ ಇಲಾಖಾ ತನಿಖೆ ಕೂಡ ವಿವಿಧ ಹಂತದ ಅಧಿಕಾರಿಗಳ ಆದೇಶದ ಮೇರೆಗೆ ನಡೆಯುತ್ತೆ. ಪೊಲೀಸ್ ಕಾನ್ಸ್ ಟೇಬಲ್, ಮುಖ್ಯಪೇದೆ ಹಾಗೂ ಎ ಎಸ್ ಐ ಮಟ್ಟದ ಸಿಬ್ಬಂದಿಗಳಿಗೆ ಎಸ್ಪಿ ರ‍್ಯಾಂಕ್ ನ ಅಧಿಕಾರಿಗಳು ಆದೇಶವನ್ನ ನೀಡಬಹುದು. ಪಿಎಸ್ ಐ ಹಾಗು ಇನ್ಸ್ಪೆಕ್ಟರ್ ರ‍್ಯಾಂಕ್ ನ ಅಧಿಕಾರಿಗಳಿಗೆ ಇನ್ಸ್ಪೆಕ್ಟರ್ ಜೆನರಲ್ ತನಿಖೆಗೆ ಆದೇಶ ನೀಡಬೇಕು. ಎಸಿಬಿ ರ‍್ಯಾಂಕ್ ಅಧಿಕಾರಿಗಳಿಗೆ ಪೊಲೀಸ್ ಮಹಾ ನಿರ್ದೇಶಕರು ತನಿಖೆಗೆ ಆದೇಶ ನೀಡಬಹುದು.
ಇನ್ನು ಎಸ್ಪಿ ಹಾಗು ಅದರ ಮೇಲ್ಪಟ್ಟ ಅಧಿಕಾರಿಗಳ ತನಿಖೆಗೆ ಸರ್ಕಾರವೇ ಆದೇಶವನ್ನ ನೀಡಬೇಕಾಗುತ್ತೆ . ಹೀಗಾಗಿ ಇಲ್ಲಿ ಅಮ್ರಿತ್ ಪೌಲ್ ಅವರ ಹೆಸರು ಕೇಳಿ ಬಂದ ಹಿನ್ನಲೆ ಅವರ ಇಲಾಖಾ ತನಿಖೆಗೆ ಸರ್ಕಾರವೇ ಆದೇಶ ಹೊರಡಿಸಬೇಕಿದೆ. ಸದ್ಯ ಮುಂದಿನ ತಿಂಗಳು ಚಾರ್ಜ್ ಶೀಟ್ ಆದ ಬಳಿಕ ಎಲ್ಲಾ ಬೆಳವಣಿಗೆ ನಡೆಯಲಿದೆ.
PublicNext
27/06/2022 12:51 pm