ಬೆಂಗಳೂರಿನ ಜನಕ್ಕೆ ಈಗೊಂದು ಸಿಹಿ ಸುದ್ದಿ. ಹೌದು. ಇನ್ಮುಂದೆ ಎಲ್ಲ ವಾಹನಗಳನ್ನ ಪೊಲೀಸರು ಚೆಕ್ ಮಾಡೋದಿಲ್ಲ. ಎಲ್ಲಿ ಬೇಕಲ್ಲಿ ಗಾಡಿ ಸೈಡ್ ಹಾಕಿ ಅಂತ ಪೊಲೀಸರು ಹೇಳೋ ಹಾಗಿಲ್ಲ.
ಹೌದು. ಈ ವಿಷಯವನ್ನ ಸ್ವತ: ಪೊಲೀಸ್ ವರಿಷ್ಠ ಅಧಿಕಾರಿ ಡಿಜಿ ಪ್ರವೀಣ್ ಸೂದ್ ಹೇಳಿದ್ದಾರೆ. ಸಿಕ್ಕ ಸಿಕ್ಕಲ್ಲಿ ಬೈಕ್ ಸೈಡ್ ಹಾಕಿ,ಕಾರ್ ಸೈಡ್ ಹಾಕಿ ಅಂತ ಪೊಲೀಸರು ಹೇಳುವಂತಿಲ್ಲ ಅಂತಲೂ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಆದರೆ, ಡ್ರಿಂಕ್ & ಡ್ರೈವರ್ ವಾಹನಗಳು ಹಾಗೂ ರೂಲ್ಸ್ ಬ್ರೇಕ್ ಮಾಡೋ ವಾಹನಗಳ ಮೇಲೆ ನಿಗಾ ಇಡಿ ಅಂತಲೇ ಪ್ರವೀಣ್ ಸೂದ್ ಟ್ವಿಟರ್ ಮೂಲಕ ಟ್ರಾಫಿಕ್ ಪೊಲೀಸರಿಗೆ ಸೂಚಿಸಿದ್ದಾರೆ.
PublicNext
27/06/2022 12:34 pm