ಬೆಂಗಳೂರು: ಹಲವು ಡ್ರಗ್ ಕೇಸ್ ಬೇಧಿಸಿ ಮಾಡಿ ದೊಡ್ಡ ಮಟ್ಟದಲ್ಲಿ ಡ್ರಗ್ ಬೇಟೆಯಾಡಿದ್ದ ಬೆಂಗಳೂರು ವಲಯ ಎನ್‌ಸಿಬಿ ಅಧಿಕಾರಿ ಅಮಿತ್ ಗಹವಾಟೆ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇತ್ತೀಚೆಗೆ ಆದಿಕೇಶವುಲು ಪುತ್ರನನ್ನ ಶ್ರೀನುವಾಸ್ ನಾಯ್ಡು ಬಂಧಿಸಿದ್ದ ಅಮಿತ್ ಗಹವಾಟೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಹೈದರಾಬಾದ್‌ನಿಂದ ವಾಪಾಸ್ ಬರುವಾಗ ಶ್ರೀನಿವಾಸ್‌ನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಹೀಗಾಗಿ ಪ್ರಭಾವಿ ವ್ಯಕ್ತಿಯನ್ನ ಬಂಧಿಸಿ ಜೈಲಿಗಟ್ಟಿದ್ದ ಅಮಿತ್ ವಿರುದ್ಧ ಹಗೆ ಸಾಧಿಸಿದ್ದಾರಾ? ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಜೊತೆ ಕೂಡ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದ ಶ್ರೀನಿವಾಸ್ ಅಮಿತ್ ಗಹವಾಟೆಯನ್ನ ಎತ್ತಂಗಡಿ ಮಾಡಿಸಿದ್ದಾರಾ? ಎಂಬ ಅನುಮಾನ ಮೂಡಿದೆ. ಸದ್ಯ ಅಮಿತ್ ಗಹವಾಟೆ ಬೆಂಗಳೂರಿನಿಂದ ಮುಂಬೈಗೆ ವರ್ಗಾವಣೆಯಾಗಿದ್ದಾರೆ.
PublicNext
01/06/2022 07:48 am