ನೋಯ್ಡಾ: ರೆಡ್ ಕಲರ್ ಜೀಪ್. ಕೈಯಲ್ಲಿ ದುಡ್ಡು. ರಸ್ತೆಯಲ್ಲಿ ಪ್ರಯಾಣ.ಇದೇನೋ ಸರಿ. ಆದರೆ, ಆ ವ್ಯಕ್ತಿ ಅಲ್ಲಿ ರಸ್ತೆಯುದ್ದಕ್ಕು ದುಡ್ಡು ತೂರ್ತಾನೇ ಇದ್ದಾನೆ. ಕೈಯಲ್ಲಿದ್ದ ಬೇಸ್‌ಬಾಲ್ ಬ್ಯಾಟ್ ಅನ್ನೂ ತಿರುಗಿಸುತ್ತಲೇ ಹೊರಟ್ಟಿದ್ದನು. ಪೊಲೀಸರು ಸುಮ್ನೆ ಇರ್ತಾರಾ ? ನೋ ವೇ ಚಾನ್ಸೇ ಇಲ್ಲ ಬಿಡಿ.
ಈ ಒಂದು ಘಟನೆಯು ನೋಯ್ಡಾದಲ್ಲಿ ನಡೆದಿದೆ. ಜೀಪ್‌ನಲ್ಲಿ ಕುಳಿತು ರಸ್ತೆಯಲ್ಲಿ ಉಪಟಳ ಮಾಡಿದ್ದ ಈ ವ್ಯಕ್ತಿಯ
ಜೀಪ್ ಅನ್ನ ನೋಯ್ಡಾ ಪೊಲೀಸರು ಈಗ ಸೀಜ್ ಮಾಡಿದ್ದಾರೆ.
ದೌಲತ್ತು ತೋರಿದ ಈ ವ್ಯಕ್ತಿಯಿಂದಲೂ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಆ ವೀಡಿಯೋವನ್ನೂ ಪೊಲೀಸರು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
PublicNext
31/05/2022 12:17 pm