ಯಾದಗಿರಿ : ಕಿಡಿಗೇಡಿಗಳಿಂದ ವ್ಯಕ್ತಿಯೋರ್ವನ ಕೊಲೆ ನಡೆದಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮನಾಳ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಸಚಿನ್ ತಂದೆ ದೇವೇಂದ್ರಪ್ಪ ಮರ್ಕುಂದ (28) ಕೆಂಭಾವಿ ಸಮೀಪದ ದಂಡಸೋಲಾಪೂರ ಗ್ರಾಮದ ಮೃತ ವ್ಯಕ್ತಿ. ಚಾಮನಾಳ ಗ್ರಾಮದ ಸಾಹು ಸ್ಕೂಲ್ ಹತ್ತಿರ ಪಾದ್ರಿಯವ್ರ ಹೊಲದಲ್ಲಿ ಕೊಲೆಗೈದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನು ಘಟನೆ ನಡೆದ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ, ಗೋಗಿ ಪೊಲೀಸ್ ಠಾಣೆ ಪಿಎಸೈ ಅಯ್ಯಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
30/05/2022 10:06 pm