ಬೆಂಗಳೂರು: ಪಿಎಸ್ಐ ಅಕ್ರಮ ಪ್ರಕರಣದ ಮೊದಲ ಭಾಗಿಯಾದ ಆರೋಪದಲ್ಲಿ ಭಾಗಿಯಾಗಿದ್ದರೆನ್ನಲಾದ ಮೊದಲ ಅಧಿಕಾರಿಯ ಬಂಧನವಾಗಿದೆ. ನೇಮಕಾತಿ ವಿಭಾಗದಲ್ಲಿ ಡಿವೈಎಸ್‌ಪಿಯಾಗಿದ್ದ ಶಾಂತಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಇಂದು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ನೇಮಕಾತಿ ವಿಭಾಗದಿಂದ ಅಕ್ರಮ ಆರೋಪ ಕೇಳಿ ಬಂದ ಮೇಲೆ ಇವರು ವರ್ಗಾವಣೆಯಗಿದ್ದರು.
ಇಂದು ವಿಚಾರಣೆ ಹಾಜರಾಗುವಂತೆ ಶಾಂತಕುಮಾರ್‌ಗೆ ನೊಟೀಸ್ ಜಾರಿ ಮಾಡಲಾಗಿತ್ತು. ಇದರಂತೆ ಹಾಜರಾದ ಡಿವೈಎಸ್‌ಪಿಯನ್ನು ಬಂಧಿಸಲಾಗಿದ್ದು ಡಿವೈಎಸ್‌ಪಿ ಬಳಸುತ್ತಿದ್ದ ಮೊಬೈಲ್ ಪೋನ್‌ಅನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಎರಡು ದಿನಗಳಿಂದ ಹಿಂದೆ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ನೀಡಿದ ಹೇಳಿಕೆ ಆಧರಿಸಿ ಡಿವೈಎಸ್‌ಪಿಯನ್ನು ಬಂಧಿಸಲಾಗಿದೆ. ಇದರಿಂದ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್ ಅವರಿಗೂ ವಿಚಾರಣೆ ಬಿಸಿ ತಟ್ಟುವ ಸಾಧ್ಯತೆಯಿದೆ. ವರ್ಗಾವಣೆಗೂ ಮುನ್ನ ಒಒಡಿ ಮೇಲೆ ಶಾಂತಕುಮಾರ್ ಕಾರ್ಯನಿರ್ವಹಿಸುತ್ತಿದ್ದರು. 1996ನೇ ಬ್ಯಾಚ್ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಸೇವೆಗೆ ಸೇರಿದ್ದರು. 2006ರಲ್ಲಿ ಆರ್ಎಸ್ಐ ಪರೀಕ್ಷೆಯಲ್ಲಿ ಬರೆದು ಉತ್ತೀರ್ಣರಾಗಿದ್ದರು. ಒಂದು ವರ್ಷ ಕಲಬುರಗಿಯಲ್ಲಿ ಕಾರ್ಯನಿರ್ವಹಿಸಿದ್ದ ಶಾಂತಕುಮಾರ್ ಎರಡು ವರ್ಷಗಳ ಹಿಂದೆ ಡಿವೈಎಸ್ಪಿಯಾಗಿ ಮುಂಬಡ್ತಿ ಪಡೆದಿದ್ರು. ಹಲವು ವರ್ಷಗಳ ನೇಮಕಾತಿ ವಿಭಾಗದಲ್ಲಿ ಠಿಕಾಣಿ ಹೂಡಿದ್ದರು.
ಸ್ಟ್ರಾಂಗ್ ರೂಮ್‌ನಲ್ಲಿ ಓಎಂಆರ್‌ನಲ್ಲಿ ತಿದ್ದುಪಡಿ ಮಾಡಲು ಶಾಂತಕುಮಾರ್ ನೆರವಾಗಿದ್ದರು ಎನ್ನಲಾಗುತ್ತಿದ್ದು. ಅಕ್ರಮದ ವಾಸನೆ ಕೇಳಿಬಂದ ಹಿನ್ನೆಲೆಯಲ್ಲಿ ಬಂಧಿಸಿ ಸಿಐಡಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
PublicNext
12/05/2022 09:23 pm