ಬೆಂಗಳೂರು: ನೇಮಕಾತಿ ಆದೇಶ ಹೊರಬೀಳುವ ಮುನ್ನವೇ ಖಾಕಿ ಸಮವಸ್ತ್ರ ಧರಿಸಿ ಶಿಸ್ತು ಉಲ್ಲಂಘಿಸಿದ್ದ ಪೊಲೀಸ್ ಕಾನ್ ಸ್ಟೇಬಲ್ ನನ್ನು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅಮಾನತು ಮಾಡಿದ್ದಾರೆ.
ವಿವೇಕನಗರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಬಸನಗೌಡ ಕರೇಗೌಡ ಅಮಾನತುಗೊಂಡ ಕಾನ್ ಸ್ಟೇಬಲ್ ಆಗಿದ್ದು. ಇತ್ತೀಚೆಗೆ ನಡೆದ ಪಿಎಸ್ ಐ ಪರೀಕ್ಷೆಯಲ್ಲಿ ಬಸನಗೌಡ ಆಯ್ಕೆಯಾಗಿದ್ರು. ನೇಮಕಾತಿ ಆದೇಶ ಪ್ರತಿ ಸಿಗುವ ಮೊದಲೇ ಸಮವಸ್ತ್ರ ಧರಿಸಿ ಊರಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ.
ಕಾನ್ ಸ್ಟೇಬಲ್ ಹುದ್ದೆಗೆ ರಾಜೀನಾಮೆ ನೀಡದೆ ಪಿಎಸ್ ಐ ಬಟ್ಟೆ ಧರಿಸಿದ್ರು. ಪೊಲೀಸ್ ನಿಯಮಾವಳಿಯ ಉಲ್ಲಂಘನೆ ಆರೋಪ ಸಂಬಂಧ ಈ ಸಸ್ಪೆಂಡ್ ಮಾಡಲಾಗಿದೆ.
PublicNext
06/05/2022 07:18 am