ಬೆಂಗಳೂರು: ಹಿಜಾಬ್ ವಿವಾದದ ಕುರಿತು ತೀರ್ಪು ನೀಡಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಕೀಲರಾದ ಸುಧಾ ಕತ್ವಾ ವಿಧಾನಧಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಮಾರ್ಚ್ 19ರಂದು ಬೆಳಗ್ಗೆ 10:22ರ ಸುಮಾರಿಗೆ ಸುಧಾ ಕಾತ್ವ ಸಹೋದ್ಯೋಗಿ ವಕೀಲ ಉಮಾಪತಿ ವಾಟ್ಸಾಪ್‌ಗೆ ಸುಮಾರು ನಾಲ್ಕು ನಿಮಿಷದ ತಮಿಳು ಭಾಷೆಯ ವಿಡಿಯೋವೊಂದು ಬಂದಿತ್ತು. ವ್ಯಕ್ತಿಯೋರ್ವ ಹಿಜಾಬ್ ಕುರಿತು ತೀರ್ಪಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನು ಏಕವಚನದಲ್ಲಿಯೇ ನಿಂದಿಸಿದ್ದಾನೆ. ಜತೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ವಿಡಿಯೋ ಮೂಲಕ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಹಾಗೂ ವಿವಿಧ ಗುಂಪುಗಳ ಮಧ್ಯೆ ದ್ವೇಷ ಉಂಟು ಮಾಡುವ ರೀತಿಯಲ್ಲಿ ಇದೆ ಎಂದು ಸುಧಾ ದೂರು ದಾಖಲಿಸಿದ್ದಾರೆ.
PublicNext
20/03/2022 07:46 am