ಬೆಂಗಳೂರು: ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಟೋಯಿಂಗ್ ವ್ಯವಸ್ಥೆಯಿಂದ ಒಟ್ಟು 24, 98 ,69, 578 ರು ವಸೂಲಾಗಿದೆ. ಈ ಪೈಕಿ ಸರ್ಕಾರಕ್ಕೆ 18,05,04,686 ರು. ಸಂದಾಯವಾಗಿದೆ. ಖಾಸಗಿ ಟೋಯಿಂಗ್ ಕಂಪನಿ, ವ್ಯಕ್ತಿಗಳಿಗೆ 6,93,64,892 ರು.ಗಳನ್ನು ಸಂದಾಯ ಮಾಡಿದೆ. ಟೋಯಿಂಗ್ ವ್ಯವಸ್ಥೆ ಮೂಲಕ ವಸೂಲಾಗಿರುವ ಮೊತ್ತದ ಕುರಿತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಪ್ರತಿನಿಧಿ ಎಸ್ ರವಿ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ (41-221)ಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 2022ರ ಜನವರಿ 17ರಂದು ಉತ್ತರಿಸಿದ್ದಾರೆ.
ರಾಜ್ಯದಲ್ಲಿ ಜಾರಿ ಇರುವ ಟೋಯಿಂಗ್ ವ್ಯವಸ್ಥೆ ಕುರಿತು ಟೋಯಿಂಗ್ ವಾಹನಗಳ ಕಾರ್ಯಾಚರಣೆ ವೇಳೆ ಅನುಸರಿಸಬೇಕಾದ ಗುಣಮಟ್ಟದ ನಿರ್ವಹಣಾ ವಿದಾನಗಳ ಕುರಿತು ಪೊಲೀಸ್ ಇಲಾಖೆಯು ಹೊರಡಿಸಿದ್ದ ಎಸ್‌ಒಪಿಯನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಟೋಯಿಂಗ್‌ನಿಂದ ವಸೂಲಾಗಿರುವ ಮೊತ್ತದ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ. ಟೋಯಿಂಗ್ ವಸೂಲಿ ಕುರಿತು ಸಚಿವ ಆರಗ ಜ್ಞಾನೇಂದ್ರ ನೀಡಿರುವ ಉತ್ತರದ ಪ್ರತಿ 2019ರಲ್ಲಿ ವಸೂಲಾದ 10,21,93,301 ರು. ಪೈಕಿ ಸರ್ಕಾರಕ್ಕೆ 6,77,70,595 ರು. ಮತ್ತು ಖಾಸಗಿ ಟೋಯಿಂಗ್ ಕಂಪನಿ, ವ್ಯಕ್ತಿಗಳಿಗೆ 3,44,22,706 ರು. ಸಂದಾಯ ಮಾಡಲಾಗಿದೆ. ಅದೇ ರೀತಿ 2020ರಲ್ಲಿ 5,56,51,250 ರು. ವಸೂಲಾಗಿರುವ ಪೈಕಿ 4,33,24,615 ರು.ಗಳನ್ನು ಸರ್ಕಾರಕ್ಕೆ 1,23,26,635 ರು.ಗಳನ್ನು ಖಾಸಗಿ ವ್ಯಕ್ತಿ, ಟೋಯಿಂಗ್ ಕಂಪನಿಗಳಿಗೆ ಸಂದಾಯ ಮಾಡಲಾಗಿದೆ.
2021ರಲ್ಲಿ 8,69,60, 920 ರು. ವಸೂಲಾಗಿರುವ ಪೈಕಿ ಸರ್ಕಾರಕ್ಕೆ 4,33,24,615 ರು. ಸರ್ಕಾರಕ್ಕೆ, 2,11,08,840 ರು.ಗಳನ್ನು ಖಾಸಗಿ ವ್ಯಕ್ತಿ, ಕಂಪನಿಗೆ ನೀಡಲಾಗಿದೆ ಎಂದು ಅಂಕಿ ಅಂಶಗಳನ್ನು ಒದಗಿಸಿದ್ದಾರೆ. 2022ರ ಜನವರಿ ಅಂತ್ಯಕ್ಕೆ 50, 64,107ರು. ವಸೂಲಾಗಿದ್ದುಈ ಪೈಕಿ 35,57,396 ರು. ಸರ್ಕಾರಕ್ಕೆ ಮತ್ತು15, 06, 711 ರು.ಗಳನ್ನು ಖಾಸಗಿ ಟೋಯಿಂಗ್ ಕಂಪನಿಗೆ ನೀಡಿರುವುದು ಉತ್ತರದಿಂದ ತಿಳಿದು ಬಂದಿದೆ. 2019ರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 7,43,45,750 ರು.ಗಳನ್ನು ಟೋಯಿಂಗ್ ವಾಹನದಿಂದ ವಸೂಲಾಗಿದಿಎ. ಈ ಪೈಕಿ 4,97,61,225 ರು.ಗಳನ್ನು ಸರ್ಕಾರಕ್ಕೆ ಜಮಾ ಮಾಡಿದ್ದರೆ, 2,45,84,525 ರು.ಗಳನ್ನು ಖಾಸಗಿ ಟೋಯಿಂಗ್ ಕಂಪನಿಗೆ ನೀಡಲಾಗಿದೆ. ಅದೇ ರೀತಿ 2020ರಲ್ಲಿ 3,57,38,700 ರು. ವಸೂಲಾಗಿರುವ ಪೈಕಿ 2,83,54,350 ರು. ಸರ್ಕಾರಕ್ಕೆ, 73,84,350 ರು. ಖಾಸಗಿ ಟೋಯಿಂಗ್ ಕಂಪನಿಗೆ ನೀಡಲಾಗಿದೆ. 2021ರಲ್ಲಿ 6,91,09,700 ರು. ವಸೂಲಾಗಿರುವ ಪೈಕಿ 5,27,69,600 ರು.ಗಳನ್ನು ಸರ್ಕಾರಕ್ಕೆ, 1,63,40,100 ರು.ಗಳನ್ನು ಖಾಸಗಿ ಕಂಪನಿಗೆ ಸಂದಾಯ ಮಾಡಲಾಗಿದೆ.
ಮೈಸೂರು ನಗರದಲ್ಲಿ 2019ರಲ್ಲಿ 6,43,200 ರು. ವಸೂಲಾಗಿರುವ ಪೈಕಿ 4,28,800 ರು. ಸರ್ಕಾರಕ್ಕೆ, 2,14,400 ರು. ಖಾಸಗಿ ಕಂಪನಿಗೆ ಸಂದಾಯ ಮಾಡಲಾಗಿದೆ. 2020, 2021 ಮತ್ತು ಮತ್ತು 2022ರ ಜನವರಿ ಅಂತ್ಯಕ್ಕೆ ಮೈಸೂರು ನಗರದಲ್ಲಿ ಟೋಯಿಂಗ್ ವಾಹನದಿಂದ ವಸೂಲಾತಿ ಮಾಡಿದ ಮೊತ್ತವನ್ನು ಶೂನ್ಯವೆಂದು ತೋರಿಸಲಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ 2019ರಲ್ಲಿ 1,08,13,950 ರು. ವಸೂಲಾಗಿರುವ ಪೈಕಿ ಸರ್ಕಾರಕ್ಕೆ 63,03,625 ರು, ಖಾಸಗಿ ಕಂಪನಿಗೆ 45,10,325 ರು.ಗಳನ್ನು ಸಂದಾಯ ಮಾಡಲಾಗಿದೆ. 2020ರಲ್ಲಿ 68,90,700 ರು. ವಸೂಲಾಗಿದ್ದು ಈ ಪೈಕಿ 55,31,850 ರು. ಸರ್ಕಾರಕ್ಕೆ, 13,58,850 ರು. ಖಾಸಗಿ ಕಂಪನಿಗೆ ನೀಡಲಾಗಿದೆ. 2021ರಲ್ಲಿ 39,58,800 ರು. ವಸೂಲಾಗಿದ್ದರ ಪೈಕಿ 31,78,400 ರು. ಸರ್ಕಾರಕ್ಕೆ, ಖಾಸಗಿ ಕಂಪನಿಗೆ 7,80,400 ರು.ಗಳನ್ನು ನೀಡಲಾಗಿದೆ. 2022ರ ಜನವರಿ ಅಂತ್ಯದವರೆಗೆ ಶೂನ್ಯವೆಂದು ದಾಖಲಿಸಲಾಗಿದೆ. ಮಂಗಳೂರು ನಗರದಲ್ಲಿ 2019ರಲ್ಲಿ 1,01,91,150ರು. ವಸೂಲಾಗಿರುವ ಪೈಕಿ 73,07,225 ರು. ಸರ್ಕಾರಕ್ಕೆ, 28,83,925 ರು.ಗಳನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. 2020ರಲ್ಲಿ 74,20,150 ರು. ವಸೂಲಾಗಿದ್ದರ ಪೈಕಿ 58,81,075ರು.ಗಳನ್ನು ಸರ್ಕಾರಕ್ಕೆ 15,39, 075 ರು.ಗಳನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. 2021ರಲ್ಲಿ 47, 71, 500 ರು.ಗಳನ್ನು ವಸೂಲು ಮಾಡಿದ್ದು ಈ ಪೈಕಿ 37, 77, 250 ರು.ಗಳು ಸರ್ಕಾರಕ್ಕೆ ಮತ್ತು9,94,250 ರು. ಖಾಸಗಿ ಕಂಪನಿಗೆ ನೀಡಲಾಗಿದೆ. 2022ರ ಜನವರಿ ಅಂತ್ಯದವರೆಗೆ ಶೂನ್ಯವೆಂದು ಹೇಳಲಾಗಿದೆ.
ಬೆಳಗಾವಿ ನಗರದಲ್ಲಿ 2019ರಲ್ಲಿ 34,47,050 ರು. ವಸೂಲಾಗಿದ್ದರ ಪೈಕಿ 17,52,020 ರು.ಗಳು ಸರ್ಕಾರಕ್ಕೆ, 16,95,030 ರು.ಗಳನ್ನು ಖಾಸಗಿ ಕಂಪನಿಗೆ ಸಂದಾಯ ಮಾಡಲಾಗಿದೆ. 2020ರಲ್ಲಿ 41,55,900 ರು. ವಸೂಲಾಗಿದ್ದರ ಪೈಕಿ 21,11,540 ರು.ಸರ್ಕಾರಕ್ಕೆ 20,44,360 ರು.ಗಳನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. 2021ರಲ್ಲಿ 50,90,850 ರು.ಗಳನ್ನು ವಸೂಲು ಮಾಡಿದ್ದು ಈ ಪೈಕಿ 25,84,830 ರು.ಗಳನ್ನು ಸರ್ಕಾರಕ್ಕೆ 25,06,020 ರು.ಗಳನ್ನು ಖಾಸಗಿಕಂಪನಿಗೆ ನೀಡಲಾಗಿದೆ. 2022ರ ಜನವರಿ ಅಂತ್ಯಕ್ಕೆ 6,41,000 ರು. ಪೈಕಿ 3,25,440 ರು. ಸರ್ಕಾರಕ್ಕೆ 3,15,560 ರು. ಖಾಸಗಿ ಕಂಪನಿಗೆ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 2019ರಲ್ಲಿ 10,74,401 ರು. ವಸೂಲಾಗಿದ್ದರ ಪೈಕಿ 5,39,900 ರು. ಸರ್ಕಾರಕ್ಕೆ, 5,34,501 ರು. ಖಾಸಗಿ ಕಂಪನಿಗೆ ನೀಡಲಾಗಿದೆ. 2020ರಲ್ಲಿ ಈ ಜಿಲ್ಲೆಯಲ್ಲಿ ಟೋಯಿಂಗ್ ವಸೂಲಾತಿ ಶೂನ್ಯವೆಂದು ಹೇಳಲಾಗಿದೆ. 2021ರಲ್ಲಿ 29,53,070 ರು. ವಸೂಲಾಗಿರುವ ಪೈಕಿ 24,65,000 ರು. ಸರ್ಕಾರಕ್ಕೆ ನೀಡಿದ್ದರೆ 4,88,070 ರು.ಗಳನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. 2022ರ ಜನವರಿ ಅಂತ್ಯಕ್ಕೆ 3,55,207 ರು. ವಸೂಲಾಗಿದ್ದು ಈ ಪೈಕಿ 2,95,906ರು.ಗಳನ್ನು ಸರ್ಕಾರಕ್ಕೆ 59,301 ರು. ಖಾಸಗಿ ಕಂಪನಿಗೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 2019ರಲ್ಲಿ 2,60,700 ರು. ವಸೂಲಾಗಿದ್ದರ ಪೈಕಿ 2,60,700 ರು.ಗಳನ್ನು ಸರ್ಕಾರಕ್ಕೆ ಸಂದಾಯ ಮಾಡಿದ್ದರೆ ಖಾಸಗಿ ಕಂಪನಿಗೆ ಶೂನ್ಯವೆಂದು ತೋರಿಸಲಾಗಿದೆ. 2020ರಲ್ಲಿ 3,69,100 ವಸೂಲಾಗಿದ್ದರೆ ಇಷ್ಟೂ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲಾಗಿದೆ. ಖಾಸಗಿ ಕಂಪನಿಗೆ ಶೂನ್ಯ ಪಾವತಿಯಾಗಿದೆ. 2021ರಲ್ಲಿ 6,17,700 ರು. ವಸೂಲಾಗಿದ್ದರ ಪೈಕಿ ಇಷ್ಟೂ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲಾಗಿದೆಯಲ್ಲದೆ ಖಾಸಗಿ ಕಂಪನಿಗೆ ಶೂನ್ಯ ಪಾವತಿಯಾಗಿದೆ.
2022ರ ಜನವರಿ ಅಂತ್ಯದವರೆಗೆ 25,200 ರು. ವಸೂಲಾಗಿದೆ. ಸರ್ಕಾರಕ್ಕೆ ಇಷ್ಟೂ ಮೊತ್ತ ಸಂದಾಯವಾಗಿದೆಯಲ್ಲದೆ ಖಾಸಗಿ ಕಂಪನಿಗೆ ಶೂನ್ಯ ಪಾವತಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2019ರಲ್ಲಿ 18,000 ರು. ವಸೂಲಾಗಿದ್ದು ಇಷ್ಟೂ ಮೊತ್ತವನ್ನೂ ಸರ್ಕಾರಕ್ಕೆ ಪಾವತಿಸಲಾಗಿದೆ. ಖಾಸಗಿಗೆ ಶೂನ್ಯ ಪಾವತಿ ಎಂದು ತೋರಿಸಲಾಗಿದೆ. 2020, 2021, 2022ರ ಜನವರಿ ಅಂತ್ಯದವರೆಗೆ ಟೋಯಿಂಗ್‌ನಿಂದ ಯಾವುದೇ ವಸೂಲು ಮಾಡಿಲ್ಲ. ರಾಯಚೂರು ಜಿಲ್ಲೆಯಲ್ಲಿಯೂ 2019ರಲ್ಲಿ 19,100 ರು. ವಸೂಲು ಮಾಡಲಾಗಿದೆ. ಇದೂ ಸೇರಿದಂತೆ 2020, 2021, 2022ರ ಜನವರಿ ಅಂತ್ಯದವರೆಗೆ ಟೋಯಿಂಗ್‌ನಿಂದ ವಸೂಲು ಮಾಡಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ 2019ರಲ್ಲಿ 13,80,000ರು. ವಸೂಲಿ ಮಾಡಲಾಗಿದ್ದರೆ ಈ ಪೈಕಿ ಸರ್ಕಾರಕ್ಕೆ 13,80,000 ರು.ಗಳನ್ನು ಸಂದಾಯ ಮಾಡಲಾಗಿದೆ. 2020ರಲ್ಲಿ 10,76,700 , 2021ರಲ್ಲಿ 4,59,300 ರು., 2022ರ ಜನವರಿ ಅಂತ್ಯದವರೆಗೆ 1,12,000 ರು.ಗಳನ್ನು ವಸೂಲು ಮಾಡಲಾಗಿದೆ. ಈ ಮೂರೂ ವರ್ಷಗಳಲ್ಲಿ ಖಾಸಗಿ ಕಂಪನಿಗೆ ಶೂನ್ಯ ಪಾವತಿ ಎಂದು ತೋರಿಸಲಾಗಿದೆ. ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೂ ಬಾಡಿವೋರ್ನ್ ಕ್ಯಾಮೆರಾಗಳನ್ನು ನೀಡಲು ಉದ್ದೇಶಿಸಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿಲ್ಲಿ 1,097 ಸಂಖ್ಯೆಬಾಡಿವೋರ್ನ್ ಕ್ಯಾಮೆರಾಗಳನ್ನು ಖರೀದಿಸಿ ಬೆಂಗಲೂರು ನಗರ ಸಂಚಾರ ವಿಭಾಗದ ವ್ಯಾಪ್ತಿಯ ಅಧಿಕಾರಿ ಸಿಬ್ಬಂದಿಗೆ ವಿತರಿಸಲಾಗುತ್ತಿದೆ. 1,028 ಬಾಡಿವೋರ್ನ್ ಕ್ಯಾಮೆರಾಗಳನ್ನುಖರೀದಿಸಲು ಕಾರ್ಯಾದೇಶ ನೀಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಮಾಡುವ ಕಾರ್ಯಾಚರಣೆ ಕುರಿತು ಗೊಂದಲ ಏರ್ಪಟಿತ್ತು. ಈ ಸಂಬಂಧ ಸಂಚಾರಿ ಜಂಟಿ ಆಯುಕ್ತ ಬಿ ಆರ್ ರವಿಕಾಂತೇಗೌಡ ಅವರು ಸ್ಪಷ್ಟನೆ ನೀಡಿದ್ದರು. ಆದರೂ ಈ ವಿಚಾರದಲ್ಲಿ ಗೊಂದಲ ಮುಂದುವರೆದಿತ್ತು. ‘ಸಿಬ್ಬಂದಿ ಜವಾಬ್ದಾರಿ, SOP ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಒಂದೇ ಏಜೆನ್ಸಿಗೆ ಟೋಯಿಂಗ್‌ನ್ನು ನೀಡಿಲ್ಲ,’ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಸಭೆ ಬಳಿಕ ರವಿಕಾಂತೇಗೌಡ ಮಾಹಿತಿ ನೀಡಿದ್ದನ್ನು ಸ್ಮರಿಸಬಹುದು.
ಕೃಪೆ- ದಿ ಫೈಲ್
PublicNext
01/03/2022 02:47 pm