ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದ ಎ2, ಎ3, ಎ4, ಎ5 ಆರೋಪಿಗಳಾದ ರಿಹಾನ್ ಷರೀಫ್, ಆಸಿಫ್ ಉಲ್ಲಾ ಖಾನ್, ನಿಹಾನ್ ಹಾಗೂ ಅಬ್ದುಲ್ ಅಫ್ನಾನ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ ವಿಶೇಷ ತಂಡ ಹರ್ಷನ ಮೊಬೈಲ್ ಪತ್ತೆಹಚ್ಚಿದೆ. ಈ ಕುರಿತು ಶಿವಮೊಗ್ಗ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹರ್ಷ ಕೊನೆಯ ಕ್ಷಣದಲ್ಲಿ ಮಾಡಿದ್ದ ಕರೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಹರ್ಷ ಹತ್ಯೆ ಪ್ರಕರಣದಲ್ಲಿ ಈವರೆಗೆ 8 ಆರೋಪಿಗಳ ಬಂಧನ ಮಾಡಲಾಗಿದೆ. ಮೊದಲು 6 ಆರೋಪಿಗಳು, ಈಗ ಇಬ್ಬರು ಆರೋಪಿಗಳು ಸೆರೆಯಾಗಿದ್ದಾರೆ. ಫರಾಜ್ ಪಾಷಾ (24), ಅಬ್ದುಲ್ ಖಾದರ್ ಜಿಲಾನ್ (25) ಸೆರೆ ಆಗಿದ್ದಾರೆ. ಈಗಾಗಲೇ 6 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ಬಂಧಿಸಿದ ಫರಾಜ್ ಮತ್ತು ಜಿಲಾನ್ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ನಾಳೆಯೊಳಗೆ ಆರೋಪಿಗಳನ್ನು ಪೊಲೀಸರು ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಇಡೀ ದಿನ ಹರ್ಷ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದ ಫರಾಜ್, ಹತ್ಯೆ ನಡೆಸಲು ಸೆಕೆಂಡ್ ಹ್ಯಾಂಡ್ ಕಾರು ತಂದಿದ್ದ ಜಿಲಾನ್ ಎಂಬಾತನನ್ನು ಬಂಧಿಸಲಾಗಿದೆ.
PublicNext
23/02/2022 09:34 pm