ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌ಗೆ ಅಶ್ಲೀಲ ವಿಡಿಯೋ ಕರೆ ಮಾಡಿದ ರಾಜಸ್ಥಾನದ ಇಬ್ಬರು ಸಹೋದರರನ್ನು ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.
ಭೋಪಾಲ್ ಸೈಬರ್ ಸೆಲ್ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ರಾಜಸ್ಥಾನದ ಚಂದಾ ಗ್ರಾಮದ ನಿವಾಸಿಗಳಾದ ರವೀನ್ ಮತ್ತು ಆತನ ಸಹೋದರ ಇಬ್ಬರನ್ನೂ ಹೆಡೆಮುರಿ ಕಟ್ಟಿದ್ದಾರೆ. 'ಭೋಪಾಲ್ ಸಂಸದರು ಆರೋಪಿಗಳ ವಿರುದ್ಧ ಟಿಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸೋಮವಾರ ಭೋಪಾಲ್ ಪೊಲೀಸರು ರಾಜಸ್ಥಾನದ ಸಿಕ್ರಿ ಪೊಲೀಸ್ ಠಾಣೆಯ ಸಹಾಯದಿಂದ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ' ಎಂದು ಭರತ್‌ಪುರ ಐಜಿ ಪ್ರಸನ್ನ ಕುಮಾರ್ ಖಮೇಸ್ರಾ ಹೇಳಿದ್ದಾರೆ.
ಏನಿದು ಪ್ರಕರಣ?:
ಆರೋಪಿಗಳು ಫೆಬ್ರವರಿ 6ರಂದು ಸಂಜೆ 7 ಗಂಟೆ ಸುಮಾರಿಗೆ ತನ್ನ ಮೊಬೈಲ್‌ಗೆ ವಾಟ್ಸಾಪ್‌ನಿಂದ ಪ್ರಜ್ಞಾ ಅವರಿಗೆ ವಿಡಿಯೋ ಕರೆ ಮಾಡಿದ್ದರು. ಅವರು ಇದರಲ್ಲಿದ್ದಾರೆಂದು ಬಿಂಬಿಸಲಾಗಿದೆ. ಹುಡುಗಿಯೊಬ್ಬಳು ವಿಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಲು ಶುರು ಮಾಡಿದ್ದಾಳೆ. ಈ ವೇಳೆ ಸಂಸದರು ವಿಡಿಯೋ ಕಾಲ್ ಕಟ್ ಮಾಡುವ ಮೂಲಕ ಅದನ್ನು ತಡೆದಿದ್ದರು. ಸ್ವಲ್ಪ ಸಮಯದ ನಂತರ ಇನ್ನೊಂದು ನಂಬರ್‌ನಿಂದ ಫೋಟೋ ಕಳಿಸಲಾಗಿತ್ತು. ಫೋಟೋದಲ್ಲಿ ಮೊದಲ ಸಂಖ್ಯೆಯಿಂದ ವೀಡಿಯೊ ಕರೆಯ ಸ್ಕ್ರೀನ್ ಶಾಟ್ ಇತ್ತು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಆರೋಪಿಗಳು ಸಂಸದೆ ಪ್ರಜ್ಞಾ ಠಾಕೂರ್ ಅವರಿಗೆ ಬೆದರಿಕೆ ಹಾಕಿದ್ದರು.
ಇದಾದ ಬಳಿಕ ಆರೋಪಿಗಳು ಮಧ್ಯಾಹ್ನ 2.30ರವರೆಗೂ ಸಂಸದರಿಗೆ ಕರೆ ಮಾಡಿದರೂ ಸಂಸದರು ಫೋನ್ ತೆಗೆಯಲಿಲ್ಲ. ಇದರ ನಂತರ, ಸಂಸದರು ಫೆಬ್ರವರಿ 7ರಂದು ಭೋಪಾಲ್‌ನ ಟಿಟಿ ನಗರದಲ್ಲಿ ಪ್ರಕರಣ ದಾಖಲಿಸಿದ್ದರು. ಭೋಪಾಲ್ ಪೊಲೀಸರು ಕರೆ ಮಾಡಿದವರ ಸಂಖ್ಯೆಗಳನ್ನು ಪತ್ತೆಹಚ್ಚಿ ಮತ್ತು ಭರತ್‌ಪುರ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಿ ಮಧ್ಯಪ್ರದೇಶಕ್ಕೆ ಕರೆತಂದಿದ್ದಾರೆ.
PublicNext
15/02/2022 06:07 pm