ನವದೆಹಲಿ: ಪ್ರಧಾನಿ ಮೋದಿ ಪಂಜಾಬ್‌ಗೆ ಭೇಟಿ ನೀಡಿದ ವೇಳೆ ಭದ್ರತಾ ಲೋಪ ಆಗಿದ್ದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಹಾಗೂ ಈ ಬಗ್ಗೆ ವಿಚಾರಣೆ ನಡೆಸಲು ತನಿಖಾ ಸಮಿತಿ ರಚಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ಈ ತನಿಖಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ.
ಇನ್ನು ಈ ಸಮಿತಿಯಲ್ಲಿ ಚಂಡಿಗಢದ ಪೊಲೀಸ್ ಮಹಾನಿರ್ದೇಶಕ, ರಾಷ್ಟ್ರೀಯ ತನಿಖಾ ದಳ, ಪಂಜಾಬ್-ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಹಾಗೂ ಪಂಜಾಬ್‌ನ ಹೆಚ್ಚುವರಿ ಡಿಜಿಪಿ ಸದಸ್ಯರಾಗಿದ್ದಾರೆ.
ಸದ್ಯ ಈ ಸಮಿತಿಯ ನೇತೃತ್ವ ವಹಿಸಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ವಕೀಲಿ ವೃತ್ತಿಯಿಂದ ನೇರವಾಗಿ ಸುಪ್ರೀಂ ಕೋರ್ಟ್‌ಗೆ ನೇಮಕವಾದ ಮೊದಲ ಮಹಿಳೆ ಎಂಬ ಶ್ರೇಯಸ್ಸು ಹೊಂದಿದ್ದಾರೆ. 2018ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಗಿ ನೇಮಕಗೊಂಡಿದ್ದ ಇವರು ಸುಪ್ರೀಂ ಕೋರ್ಟ್‌ನ ಹಿರಿಯ ಮಹಿಳಾ ವಕೀಲರಲ್ಲಿ ಎರಡನೆಯವರು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
PublicNext
12/01/2022 05:25 pm