ಬೆಂಗಳೂರು: ನಮ್ಮ ದೇಶದ ಹೆಮ್ಮೆ CDS ಜನರಲ್ ಬಿಪಿನ್ ರಾವತ್ ಸಾವಿನ ಬಗ್ಗೆ ಫೇಸ್ ಬುಕ್ ನಲ್ಲಿ
ಕೆಟ್ಟ ಕಾಮೆಂಟ್ ಹಾಕಿದ್ದ ವ್ಯಕ್ತಿಯನ್ನ ವಿಧಾನ ಸೌಧದ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೂ ಆದೇಶ ನೀಡಿದೆ.
ಬಂಧಿತ ವ್ಯಕ್ತಿಯ ಹೆಸರು ವಸಂತ್ ಕುಮಾರ್ (40) ಮೈಸೂರು ಮೂಲಕ ವ್ಯಕ್ತಿ. ಈ ವ್ಯಕ್ತಿಯ ಬಿಪಿನ್ ರಾವತ್
ಬಗ್ಗೆ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಹಾಕಿದ್ದ. ಅದಕ್ಕೇನೆ ವಿಧಾನ ಸೌಧದ ಪೊಲೀಸರು ಈತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮೈಸೂರು ಮೂಲದ ಈ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷನ್ ಆಗಿಯೇ ಕೆಲಸ ಮಾಡುತ್ತಿದ್ದ. ಆದರೆ, ಬಿಪಿನ್ ರಾವತ್ ಬಗ್ಗೆ ಕೆಟ್ಟದಾಗಿಯೇ ಕಾಮೆಂಟ್ ಮಾಡಿದ್ದಾನೆ.
'ಬಿಪಿನ್ ರಾವತ್ ಮೋದಿ ಗುಲಾಮತನದ ಒಂದು ತಲಮಾರು'' ಚೈನಾ ದೇಶ ಭಾರತ ಗಡಿಯಲ್ಲಿ ಬಂದು ಹಳ್ಳಿಗಳನ್ನ ನಿರ್ಮಿಸಿದಾಗ ಮೋದಿಯಂತೆ ಬುಡಬುಡಿಕೆ ಹೇಳಿಕೆ ಕೊಟ್ಟ ವ್ಯಕ್ತಿ' ಅಂತಲೂ ಫೇಸ್ ಬುಕ್ ನಲ್ಲಿ ಬರೆದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
PublicNext
12/12/2021 06:17 pm