ಚಿಕ್ಕಮಗಳೂರು: ಕಾಫಿನಾಡು ಪೊಲೀಸರು ಭರ್ಜರಿ ಕಾರ್ಯಾಚರಣೆಯ ಮೂಲಕ ಬರೋಬ್ಬರಿ ಒಂದು ಕೋಟಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡು ಮಾಲಿಕರಿಗೆ ಹಸ್ತಾಂತರಿಸಿದ್ದಾರೆ.
ನಗದು, ಚಿನ್ನಾಭರಣ, ಸೇರಿದಂತೆ ಅನೇಕ ವಸ್ತುಗಳು, ಕಳವು ಆಗಿದ್ದ 50 ಬೈಕ್ ಗಳು ಮರಳಿ ಹಿಂದಿರುಗಿಸಲಾಗಿದೆ. ಜಿಲ್ಲೆಯ ವಿವಿಧ ಠಾಣೆಗಳಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಎಸ್ಪಿ ಅಕ್ಷಯ್ ಅವರು ಖುದ್ದು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಕಳೆದುಕೊಂಡಿದ್ದ ಚಿನ್ನಾಭರಣ ಮರಳಿ ಸಿಕ್ಕಿದ್ದನ್ನ ಕಂಡು ಮಾಲೀಕರು , ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
PublicNext
09/11/2021 02:20 pm