ತಿರುವನಂತಪುರ: ಎಂಡೋಸಲ್ಫಾನ್ ದುರಂತ ಎಲ್ಲರನ್ನು ಬೆಚ್ಚಿಬೀಳಿಸುವಂತದ್ದು ಸದ್ಯ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಕಾಸರಗೋಡಿನ ಎಂಡೋಸಲ್ಫಾನ್ ದುರಂತಕ್ಕೆ ಒಳಗಾದ 3014 ಸಂತ್ರಸ್ತರಿಗೆ ಇದುವರೆಗೆ ಒಟ್ಟು 119.34 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ.
ಸಾಮಾಜಿಕ ನ್ಯಾಯ ಸಚಿವೆ ಆರ್.ಬಿಂದು ಅವರು ವಿಧಾನಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ‘2017ರ ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಎಂಡೋಸಲ್ಫಾನ್ ದುರಂತದ 3014 ಸಂತ್ರಸ್ತರಿಗೆ ಒಟ್ಟು 119.34 ಕೋಟಿ ಪರಿಹಾರ ವಿತರಿಸಲಾಗಿದೆ. ಉಳಿದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ’ ಎಂದು ಸಚಿವೆ ಹೇಳಿದರು.
ಸಾಮಾಜಿ ಭದ್ರತಾ ಮಿಷನ್ ಮೂಲಕ ಸಂತ್ರಸ್ತರಿಗೆ ಮಾಸಿಕ ಪಿಂಚಣಿ, ಅವರನ್ನು ನೋಡಿಕೊಳ್ಳುವವರಿಗೆ ‘ಆಶ್ವಾಸಕಿರಣ’ ಪಿಂಚಣಿ, 3ಲಕ್ಷ ವರೆಗಿನ ಬ್ಯಾಂಕ್ ಸಾಲ ಮನ್ನಾ, ಸಾರಿಗೆ ಸೌಲಭ್ಯ, ಸಂತ್ರಸ್ತ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಉಚಿತ ಪಡಿತರ ಮೊದಲಾದ ಕ್ರಮಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ.
ಎಂಡೋಸಲ್ಫಾನ್ ಇದು ವಿಷದ ಅಂಶವನ್ನು ಹೊಂದಿದ್ದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎನ್ನಲಾಗಿದೆ.
PublicNext
02/11/2021 03:00 pm