ಮುಂಬೈ: ದೂರವಾಣಿ ಕದ್ದಾಲಿಕೆ ಮತ್ತು ಡೇಟಾ ಸೋರಿಕೆ ಪ್ರಕರಣದಲ್ಲಿ ಮುಂಬೈ ಪೋಲಿಸರ ಸೈಬರ್ ವಿಭಾಗವು ಸಿಬಿಐ ನಿರ್ದೇಶಕ ಹಾಗೂ ಮಹಾರಾಷ್ಟ್ರದ ಮಾಜಿ ಡಿಜಿಪಿ ಸುಬೋಧ್ ಕುಮಾರ್ ಜೈಸ್ವಾಲ್ ಅವರಿಗೆ ಶನಿವಾರ ಸಮನ್ಸ್ ಜಾರಿ ಮಾಡಿದೆ.
ರಾಜಕೀಯ ತಿರುವುಗಳನ್ನು ಪಡೆದಿರುವ ಈ ಫೋನ್ ಕದ್ದಾಲಿಗೆ ಪ್ರಕರಣದ ತನಿಖೆ ಈಗ ಮತ್ತೆ ಚುರುಕು ಪಡೆದಿದೆ.ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು ಅಕ್ಟೋಬರ್ 14ರಂದು (ಗುರುವಾರ) ವಿಚಾರಣೆಗೆ ಹಾಜರಾಗುವಂತೆ ಜೈಸ್ವಾಲ್ ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಏನದು ಪ್ರಕರಣ?
ಈ ಪ್ರಕರಣವು ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರು ರಾಜ್ಯದ ಗುಪ್ತಚರ ಇಲಾಖೆಯ ನೇತೃತ್ವ ವಹಿಸಿದ್ದಾಗ ಮಹಾರಾಷ್ಟ್ರದಲ್ಲಿ ನಡೆದ ಪೊಲೀಸ್ ವರ್ಗಾವಣೆ ಭ್ರಷ್ಟಾಚಾರದ ಆರೋಪದ ಕುರಿತು ಸಿದ್ಧಪಡಿಸಲಾದ ವರದಿಯ 'ಸೋರಿಕೆ'ಗೆ ಸಂಬಂಧಿಸಿದೆ. ಈ ಅವಧಿಯಲ್ಲಿ ಜೈಸ್ವಾಲ್ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಾಗಿದ್ದರು. ವಿಚಾರಣೆಯ ಸಮಯದಲ್ಲಿ ಹಿರಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ಫೋನ್‌ಗಳನ್ನು ಕಾನೂನುಬಾಹಿರವಾಗಿ ಕದ್ದಾಲಿಕೆ ಮಾಡಲಾಯಿತು ಮತ್ತು ಉದ್ದೇಶಪೂರ್ವಕವಾಗಿ ವರದಿಯನ್ನು ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
PublicNext
10/10/2021 06:31 pm