ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಆರ್ಯನ್ ಅಕ್ಟೋಬರ್ 7ರವರೆಗೆ ಎನ್ ಸಿಬಿ ಕಸ್ಟಡಿಗೆ

ಮುಂಬೈ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರನ್ನು ಜಾಮೀನಿನ ಮೇಲೆ ಸೋಮವಾರ ಮುಂಬೈನ ಕಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮುಂಬೈ ಕರಾವಳಿಯಲ್ಲಿ ಶನಿವಾರ ಕ್ರೂಸ್ ಹಡಗಿನ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿದ ನಂತರ ಖಾನ್ ಮತ್ತು ಇತರ ಏಳು ಜನರನ್ನು ಬಂಧಿಸಲಾಗಿತ್ತು.

ಸದ್ಯ ವಾದ ಪ್ರತಿವಾದವನ್ನು ಆಲಿಸಿದ ಕೋರ್ಟ್ ಆರ್ಯನ್ ಕಸ್ಟಡಿ ಅವಧಿಯನ್ನು ಅಕ್ಟೋಬರ್ 13ರವರೆಗೆ ವಿಸ್ತರಿಸುವಂತೆ ಕೋರ್ಟ್ ಮುಂದೆ ಎನ್ ಸಿಬಿ ಕೋರಿದೆ. ಆದರೆ, ಅಕ್ಟೋಬರ್ 7ರವರೆಗೆ ಎನ್ ಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

Edited By : Nirmala Aralikatti
PublicNext

PublicNext

04/10/2021 05:48 pm

Cinque Terre

69.94 K

Cinque Terre

15