ಬೆಂಗಳೂರು: ಗೂಂಡಾ ಕಾಯ್ದೆ ಅಡಿ ಬಂಧನ ಆದೇಶ ಕೊಟ್ಟಿದ್ದ ಹೈಕೋರ್ಟ್ ಅದನ್ನು ರದ್ದುಗೊಳಿಸಿದೆ. ನಂತರ ಪೊಲೀಸ್ ಆಯುಕ್ತರಿಗೆ ದಂಡ ಹಾಕಿದೆ.
ಹೌದು. ಪ್ರಕರಣವೊಂದರಲ್ಲಿ ಗೂಂಡಾ ಕಾಯ್ದೆ ಅಡಿ ವ್ಯಕ್ತಿಯೊಬ್ಬರನ್ನು ಬಂಧಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಈ ಪ್ರಕಾರ ಆ ವ್ಯಕ್ತಿಯನ್ನು ಪೊಲೀಸರು ಕಳೆದ ಡಿಸೆಂಬರ್ 14ರಿಂದ ಬಂಧನದಲ್ಲಿರಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ಕಾರ್ತಿಕ್ ಎನ್ನುವವರು ಅರ್ಜಿ ಸಲ್ಲಿಸಿದ್ದರು. 12 ಜನವರಿ 2021ರಂದು ಈ ಬಂಧನಗಳ ವಿರುದ್ಧ ತಾವು ಮನವಿ ಸಲ್ಲಿಸಿದರೂ ಕಾಯಿದೆ ಅನ್ವಯ ಇರುವ ಸಲಹಾ ಮಂಡಳಿ ಅಥವಾ ರಾಜ್ಯ ಸರ್ಕಾರ ಅದನ್ನು ಪರಿಶೀಲಿಸಿಲ್ಲವೆಂದೂ ದೂರಿದ್ದರು.
ಇದನ್ನು ಪರಿಶೀಲಿಸಿದ ನ್ಯಾಯಾಲಯವು ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದೆ.
PublicNext
23/09/2021 07:07 pm