ಚಿತ್ರದುರ್ಗ : ಅನ್ನದಾತನ ಮೇಲೆ ಆಹಾರ ನಿರೀಕ್ಷಕನೊಬ್ಬ ಹಲ್ಲೆ ಮಾಡಿರುವ ಆರೋಪವೊಂದು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಚಿತ್ರದುರ್ಗ ನಗರದ ಪುಡ್ ಇನ್ಸ್ಪೆಕ್ಟರ್ ಮೈಲಾರಪ್ಪ ಅವರು ರೈತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ರೈತ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮುಂದೆ ಅಳಲು ತೋಡಿಕೊಂಡಿದ್ದಾನೆ. ಜಿಲ್ಲೆಯ ಜನ್ನೇನಹಳ್ಳಿ ಗ್ರಾಮದ ಮೋಹನ್ ರೆಡ್ಡಿ ಹಲ್ಲೆಗೊಳಗಾದ ರೈತ.
APMC ಮಾರುಕಟ್ಟೆಗೆ ರಾಗಿ ತರುವಾಗ ಮಾರ್ಗ ಮಧ್ಯ ಕಳ್ಳ ಎಂದು ಹಿಡಿದು ರೈತನನ್ನು ಥಳಿಸಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.
ಆಹಾರ ನಿರೀಕ್ಷಕ ಮೈಲಾರಪ್ಪ ಹಲ್ಲೆ ಮಾಡಿದ ಎರಡು ಚೀಲ ರಾಗಿ ಮನೆಗೆ ಕೊಂಡೊಯ್ದಿದ್ದಾರೆ ಎನ್ನಲಾಗಿದ್ದು
ಪುಡ್ ಇನ್ಸ್ಪೆಕ್ಟರ್ ಮೈಲಾರಪ್ಪನ ವಿರುದ್ದ ರೈತರ ಗಂಭೀರ ಆರೋಪ ಮಾಡಿದ್ದಾರೆ. ಮಟ ಮಟ ಮಧ್ಯಾಹ್ನವೇ ಆಹಾರ ನಿರೀಕ್ಷಕ ಎಣ್ಣೆ ಮತ್ತಿನಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾನೆ. ಮೈಲಾರಪ್ಪ ಕಂಡು ಡಿಸಿ ಮನ್ನಿಕೇರಿ ಗರಂ ಆದರು. ಕೂಡಲೇ ಮದ್ಯಪಾನ ಮಾಡಿದ್ದಾರ ಎಂದು ಟೆಸ್ಟ್ ಮಾಡುವಂತೆ ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
PublicNext
21/09/2021 04:55 pm