ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆಯ ಬಳಿ ಎಸ್ಯುವಿ ಕಾರಿನಲ್ಲಿ ಪತ್ತೆಯಾಗಿದ್ದ ಸ್ಫೋಟಕವಿರಿಸಿದ್ದು ನಾವೇ ಎಂದು ಜೈಶ್ ಉಲ್ ಹಿಂದ್ ಎಂಬ ಸಂಘಟನೆ ಹೇಳಿದ್ದು, ಕೃತ್ಯದ ಹೊಣೆ ಹೊತ್ತುಕೊಂಡಿದೆ.
ಕಾರಿನೊಳಗೆ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಅಂಬಾನಿ ಕುಟುಂಬಕ್ಕೆ ಬೆದರಿಕೆಯೊಡ್ಡಿರುವ ಪತ್ರವೂ ಇತ್ತು. ಟೆಲಿಗ್ರಾಂ ಆ್ಯಪ್ನಲ್ಲಿ ಸಂದೇಶ ಕಳುಹಿಸುವ ಮೂಲಕ ಈ ಕೃತ್ಯದ ಹೊಣೆಯನ್ನು ಜೈಶ್ ಉಲ್ ಹಿಂದ್ ಹೊತ್ತಿದೆ. ಆದರೆ ಇದನ್ನ ಮುಂಬೈ ಪೊಲೀಸರು ದೃಢಪಡಿಸುವುದು ಬಾಕಿ ಇದೆ.
PublicNext
28/02/2021 02:53 pm