ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಜೂಜುಕೋರರ ಮೇಲೆ ಪೊಲೀಸ್ ದಾಳಿ: ಬಂಧನ ಭೀತಿಯಿಂದ ನದಿಗೆ ಹಾರಿದ ಯುವಕರು

ಬೆಳಗಾವಿ: ಜೂಜಾಡುತ್ತಿದ್ದ ವೇಳೆ ಪೊಲೀಸ್ ದಾಳಿಗೆ ಹೆದರಿ ಮಲಪ್ರಭಾ ನದಿಗೆ ಹಾರಿದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.

ರಾಮದುರ್ಗ ಹೊರವಲಯದಲ್ಲಿ ನಿನ್ನೆ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದ ಮಲಪ್ರಭಾ ನದಿಯ ದಡದಲ್ಲಿ ಯುವಕರ ತಂಡವೊಂದು ಇಸ್ಪೀಟು ಆಡುವ ಖಚಿತ ಮಾಹಿತಿ ಮೇರೆಗೆ ರಾಮದುರ್ಗ ಪೋಲಿಸರ ದಾಳಿ ನಡೆಸಿದ್ದರು.

ಈ ವೇಳೆ ಪೋಲಿಸರನ್ನ ಕಂಡು ಜೂಜು ಆಡುತ್ತಿದ್ದ ಯುವಕರು ದಿಕ್ಕಾಪಾಲಗಿ ಓಡಿದ್ದಾರೆ. ಇದರಲ್ಲಿ ಆರು ಜನ ಯುವಕರು ಮಲಪ್ರಭಾ ನದಿಗೆ ಹಾರಿದ್ದರು. ಅದರಲ್ಲಿ ನಾಲ್ವರು ಈಜಿ ದಡ ಸೇರಿದ್ರೆ, ಇನ್ನೂ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.

ಮಂಜು ಬಂಡಿವಡ್ಡರ್(30), ಸಮೀರ್ ಬಟಕುರ್ಕಿ(22) ಎಂಬ ಇಬ್ಬರು ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಇಬ್ಬರು ಯುವಕರಿಗಾಗಿ ಅಗ್ನಿಶಾಮಕ ಹಾಗು ಪೊಲೀಸರಿಂದ ಶೋಧ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.

Edited By : Manjunath H D
PublicNext

PublicNext

08/02/2021 08:01 pm

Cinque Terre

138.5 K

Cinque Terre

0

ಸಂಬಂಧಿತ ಸುದ್ದಿ