ಬೆಂಗಳೂರು: ಹಣ ಪಡೆದು ಮೋಸ ಮಾಡುತ್ತಿದ್ದ ಯುವರಾಜ್ ವಂಚನೆ ಪ್ರಕರಣ ಸಂಬಂಧ ಅಕ್ರಮವಾಗಿ ಸಂಪಾದಿಸಿದ ಆತನ ಒಟ್ಟು ಆಸ್ತಿ ಮುಟ್ಟುಗೋಲು ಹಾಕುವಂತೆ 67ನೇ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ದೊಡ್ಡ ದೊಡ್ಡ ಹುದ್ದೆ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದ ಆರೋಪ ಹಿನ್ನೆಲೆ ಸಿಸಿಬಿ ಯುವರಾಜ್ನನ್ನು ಬಂಧಿಸಿತ್ತು.
ಬೆಂಗಳೂರು, ಮಂಡ್ಯ, ಮದ್ದೂರಿನಲ್ಲಿ 26 ಆಸ್ತಿಗಳ ಮಾಹಿತಿ ಸಂಗ್ರಹಿಸಿ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ಅಫಿಡವಿಡ್ ಸಲ್ಲಿಕೆಯಾಗಿತ್ತು. ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡ ನ್ಯಾ. ಕ್ಯಾತ್ಯಾಯಿನಿ, ಯುವರಾಜ್ ಹಾಗೂ ಪತ್ನಿ ಪ್ರೇಮಾ ಹೆಸರಿನಲ್ಲಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ್ದಾರೆ.
PublicNext
22/01/2021 07:05 pm