ಹೈದರಾಬಾದ್: ತನ್ನ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಎರಡು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ತಂದೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಎಲ್‌ಬಿ ನಗರದಲ್ಲಿರುವ ಎಡಿಜೆ ನ್ಯಾಯಾಲಯ ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿ ಜಗತ್‌ಗಿರಿಗುಟ್ಟಾ ನಿವಾಸಿ ಮೊಗಿಲಿ ಅಮರನಾಥ್ (45)ನನ್ನು ಶಿಕ್ಷೆಗೊಳಪಡಿಸಿದೆ. ಹಲ್ಲೆ ಬಗ್ಗೆ ಏನಾದರೂ ಬಹಿರಂಗಪಡಿಸಿದರೆ ನಿಮ್ಮ ತಾಯಿಯನ್ನೇ ಕೊಲೆ ಮಾಡುತ್ತೇನೆ ಎಂದು ಮಕ್ಕಳಿಗೆ ಹೆದರಿಸಿದ್ದ ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.
ಅಪರಾಧಿ ಅಮರನಾಥ್ ವಿರುದ್ಧ ವಿಶೇಷ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
PublicNext
02/01/2021 07:18 pm