ನೋಯ್ಡಾ: ಕ್ಷುಲ್ಲಕ ಕಾರಣಕ್ಕೆ ಪೊಲೀಸರೊಂದಿಗೆ ಕ್ಯಾತೆ ತೆಗೆದ ಮಹಿಳೆ ಓರ್ವ ಕಾನ್ಸ್‌ಟೇಬಲ್‌ರನ್ನು ಹಿಡಿದು ಎಳೆದಾಡಿದ್ದಾಳೆ. ತೀರಾ ಅಶ್ಲೀಲ ಪದಗಳಿಂದ ನಿಂದಿಸಿದ್ದಾಳೆ. ಉತ್ತರ ಪ್ರದೇಶದ ನೋಯ್ಡಾ ನಗರದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ.
ಮಹಿಳೆ ಪಾನಮತ್ತಳಾಗಿದ್ದಳು ಎನ್ನಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳ ಮುಂದೆ ಈಕೆ ತನ್ನ ಗುಪ್ತಾಂಗಕ್ಕೆ ಬಡಿದಿಕೊಂಡು ಅಸಭ್ಯತೆ ಪ್ರದರ್ಶಿಸಿದ್ದಾಳೆ. ಏರು ಧ್ವನಿಯಲ್ಲಿ ಧಮ್ಕಿ ಹಾಕಿದ್ದಾಳೆ. ಬಿಹಾರಿ ಜನರನ್ನು ತುಚ್ಛ ಮಟ್ಟಕ್ಕೆ ಹೋಲಿಸಿದ್ದಾಳೆ. ಈಕೆಯ ಲಗಾಮಿಲ್ಲದ ವರ್ತನೆ ಕಂಡು ಸ್ವತಃ ಪೊಲೀಸರೇ ದಂಗಾಗಿದ್ದಾರೆ. ನಂತರ ಈಕೆಯನ್ನು ಬಂಧಿಸಿದ ಪೊಲೀಸರು ಠಾಣೆಗೆ ಕರೆದೊಯ್ದು 'ವಿಚಾರಣೆ' ನಡೆಸುತ್ತಿದ್ದಾರೆ.
PublicNext
21/08/2022 08:41 pm