ಕೋಲ್ಕತ್ತಾ : ಮೊಬೈಲ್ ಚಾರ್ಜರ್ ವಯರ್ ತೆಗೆದುಕೊಂಡು ಪತಿಯ ಕುತ್ತಿಗೆಗೆ ಬಿಗಿದು ಕೊಲೆ ಗೈದ ಕೇಸ್ ಸಂಬಂಧ ಪಟ್ಟಂತೆ ಪತ್ನಿ ಲಾಯರ್ ಗೆ ಪಶ್ಚಿಮ ಬಂಗಾಳದ ಪ್ರಥಮ ದರ್ಜೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಲಾಯರ್ ಅನಿಂದಿತಾ ಪಾಲ್ ಗೆ ಶಿಕ್ಷೆಗೆ ಜೀವಾವಧಿ ಶಿಕ್ಷೆ ಒಳಗಾದವಳು ಮತ್ತು 10,000 ರೂಪಾಯಿ ದಂಡ ವಿಧಿಸಿದ್ದು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಕೋರ್ಟ್ ವಕೀಲೆಗೆ ಜೀವಾವಧಿ ಶಿಕ್ಷೆ ನೀಡಿದೆ.
ಅಪರಾಧಿ ಸಾಕ್ಷಿ ನಾಶ ಕಾರಣ ಆಗಿದ್ದರೆಂಬ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ವರ್ಷ ಜೈಲು ಶಿಕ್ಷೆ ನೀಡಿದೆ.
ಸ್ಪೇಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಭಾಸ್ ಚಟರ್ಜಿ, ಇದೊಂದು ಪೂರ್ವ ನಿಯೋಜಿತ ಕೊಲೆ ಆಗಿದ್ದು ಆರೋಪ ಮಾಡಿ ಮರಣದಂಡನೆ ಶಿಕ್ಷೆ ವಿಧಿಸುವಂತೆ ವಾದ ಮಾಡಿದ್ದರು ಮಹಿಳೆ ಮೂರು ವರ್ಷದ ಮಗು ತಾಯಿಯಾಗಿರುವ ಕಾರಣ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ.
ಈ ಬಗ್ಗೆ ಕೋರ್ಟ್ ನಿಂದ ಅನಿಂದಿತಾಳನ್ನು ಜೈಲಿಗೆ ವಾಹನದಲ್ಲಿ ಕರೆದುಕೊಂಡು ಹೋಗುವಾಗ ನಾನು ಕೊನೆ ತನಕ ಈ ಕೇಸನಲ್ಲಿ ಹೋರಾಟ ಮಾಡುವೆ ಎಂದಿದ್ದಾರೆ.
PublicNext
18/09/2020 06:57 pm