ತುಮಕೂರು : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಅಜ್ಜಪ್ಪನಹಳ್ಳಿಯ ಇತಿಹಾಸ ಪ್ರಸಿದ್ದ ಆಂಜನೇಯ ಸ್ವಾಮಿ ದೇವಾಲಯದ ಹುಂಡಿ ಒಡೆದ ಕಳ್ಳರು ಅಪಾರ ಪ್ರಮಾಣದ ನಗದು ದೋಚಿ ಪರಾರಿಯಾಗಿದ್ದಾರೆ.
ಭಾನುವಾರ ರಾತ್ರಿ ಈ ಕಳ್ಳತನ ನಡೆದಿದ್ದು,ಹುಂಡಿ ಒಡೆಯಲು ಬಂದ ಕಳ್ಳರು ದೇವಸ್ಥಾನದ ಸಮೀಪ ಮದ್ಯಪಾನ ಮಾಡಿ ಬಳಿಕ ದೇವಾಲಯದ ಬಾಗಿಲು ಮೀಟಿ ಹುಂಡಿ ಒಡೆದಿದ್ದಾರೆ.
ಬೀರನಕಲ್ಲು,ಸ್ವಾಂದೇನಹಳಿ ಹಾಗೂ ಅಜ್ಜಪ್ಪನಹಳ್ಳಿ ಗ್ರಾಮಗಳೂ ಸೇರಿದಂತೆ ಗುಬ್ಬಿ,ಬೆಂಗಳೂರು,ದಾವಣಗೆರೆಯಲ್ಲೂ ಅಪಾರ ಭಕ್ತರಿರುವ ಈ ದೇವಾಲಯಲ್ಲಿ ಶ್ರಾವಣ ಮಾಸದಲ್ಲಿ ಅಪಾರ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ ಕಾಣಿಕೆ ಅರ್ಪಿಸಿದ್ದರು.
ಸದ್ಯ ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯಕ್ಕೆ ಸಿಸಿ ಟಿವಿ ಅಳವಡಿಸುವಂತೆ ಹಲವು ದಿನಗಳ ಹಿಂದೆಯೇ ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದರೂ ಸಹ ತಾಲ್ಲೂಕು ಆಡಳಿತ ಸಿ ಸಿ ಟಿವಿ ಅಳವಡಿಸದೆ ಬೇಜವಾಬ್ದಾರಿ ತೋರಿದ ಕಾರಣ ಕಳ್ಳತನ ನಡೆದಿದೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆ,ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
PublicNext
15/08/2022 06:48 pm