ಬೆಳಗಾವಿ: ಬೆಳಗಾವಿಯಲ್ಲಿ ಐಡಿ ಕಾರ್ಡ್ ಇಲ್ಲದೇ ಹನುಮಂತ ನಿರಾಣಿ ಅವರ ಆಪ್ತ ಸಹಾಯಕ ಸುರೇಶ್ ಮತ ಎಣಿಕೆ ಕೇಂದ್ರ ಪ್ರವೇಶಿಸಿದ್ದಾರೆ. ಇದನ್ನು ಗಮನಿಸಿ ಜೆಡಿಎಸ್ ಚುನಾವಣಾ ಏಜೆಂಟರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವಿಷಯ ತಿಳಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನಿರಾಣಿ ಅವರ ಆಪ್ತ ಸಹಾಯಕನನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದು ಕೊಂಡಿದ್ದಾರೆ. ನಿಮ್ಮ ಬಳಿ ಗುರುತಿನ ಚೀಟಿ ಇಲ್ಲದೇ ನೀವು ಒಳಗೆ ಯಾಕೆ ಬಂದಿರಿ ಎಂದು ಪ್ರಶ್ನಿಸಿದ್ದಾರೆ. ಹಾಗೂ ಸ್ಥಳದಲ್ಲೇ ಇದ್ದ ಪೊಲೀಸರಿಗೆ ಕೂಡಲೇ ಆತನನ್ನು ಹೊರಗೆ ಕಳಿಸಿ ಎಂದು ಸೂಚಿಸಿದ್ದಾರೆ. ಪೊಲೀಸರಿಗೆ ಆತನನ್ನ ಹೊರಗೆ ಹಾಕುವಂತೆ ಸೂಚಿಸಿದ್ದಾರೆ.
ಆ ಬಳಿಕ ಚುನಾವಣಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್‌ಗೆ ದೂರನ್ನು ದಾಖಲಿಸಿದ್ದಾರೆ. ಆದಿತ್ಯ ಅಮ್ಲಾನ್ ಬಿಸ್ವಾಸ್ ಪೊಲೀಸರು ಮತ್ತು ಚುನಾವಣಾ ಸಿಬ್ಬಂದಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ಐಡಿ ಕಾರ್ಡ್ ತಪಾಸಣೆ ಮಾಡದೇ ಏಕೆ ಒಳಗೆ ಬಿಡ್ತೀರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.
PublicNext
15/06/2022 04:56 pm