ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಇಬ್ಬರು ಯುವಕರ ಮೇಲೆ ಹಲ್ಲೆ ಪ್ರಕರಣ; ಗ್ರಾಮಕ್ಕೆ ಎಸ್ಪಿ ಶಿವಪ್ರಕಾಶ್‌ ಭೇಟಿ, ಪರಿಸ್ಥಿತಿ ಅವಲೋಕನ

ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮೊಹರಂ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಇಬ್ಬರಿಕೆ ಚಾಕು ಇರಿತವಾಗಿದೆ. ತೌಸಿಫ್ ಹೊಸಮನಿ(23), ಮುಸ್ತಾಕ್ ಹೊಸಮನಿ (24) ಹಲ್ಲೆಗೊಳಗಾಗಿದ್ದಾರೆ. ಈ ಬಗ್ಗೆ ‌ಎಸ್ ಪಿ ಶಿವಪ್ರಕಾಶ್ ದೇವರಾಜು ಪ್ರತಿಕ್ರಿಯೆ ನೀಡಿದ್ದು ಹೀಗೆ...

ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೌಸಿಫ್ ಎಂಬಾತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆಳವಾದ ಗಾಯವಾಗಿರೋದ್ರಿಂದ ವಿಶೇಷ ನಿಗಾ ವಹಿಸಿ ಚಿಕಿತ್ಸೆ ನಡೆಸಲಾಗ್ತಿದೆ. ಈಗಾಗಲೇ ಘಟನೆ ಸಂಬಂಧ ಯಲ್ಲಪ್ಪ ಹಾಗೂ ಸೋಮೇಶ ಅನ್ನೋರನ್ನು ವಶಕ್ಕೆ ಪಡೆಯಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲಎಂದರು.

ಮಲ್ಲಸಮುದ್ರ ಗ್ರಾಮದ ತೌಸಿಫ್, ಮುಸ್ತಾಕ್ ಸಂಭಾವಿತರಾಗಿದ್ರು. ಮುಸ್ತಾಕ್ ಕಾಲೇಜು ಹೋಗ್ತಿದ್ದ ಹುಡುಗ. ತೌಸಿಫ್ ಬಿಲ್ಡಿಂಗ್ ಕೆಲಸ ಮಾಡ್ತಿದ್ದ. ಇಬ್ಬರೂ ತಂಟೆ- ತಕರಾರು ಅಂತಾ ಹೋದವರಲ್ಲ. ಹೀಗಿದ್ರೂ ಇಬ್ಬರನ್ನು ಟಾರ್ಗೆಟ್ ಮಾಡಿ ಹಲ್ಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಘಟನೆ ಬೆಳಕಿಗೆ ಬರ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಎಸ್ ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪ್ರಕರಣ ಮಾಹಿತಿ ಪಡೆದ್ರು. ನಂತ್ರ ಮಲ್ಲಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಡಿಆರ್ ವಾಹನ ನಿಯೋಜನೆ ಮಾಡಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗ್ತಿದೆ.

Edited By :
PublicNext

PublicNext

10/08/2022 03:13 pm

Cinque Terre

51.5 K

Cinque Terre

0