ಮುಂಬೈ: ಡ್ರಗ್ಸ್ ಕೇಸ್ ನಲ್ಲಿ ಜೈಲುಪಾಲಾಗಿರುವ ಆರ್ಯನ್ ಜಾಮೀನಿಗಾಗಿ ತಂದೆ ಶಾರುಖ್ ಖಾನ್ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಆರ್ಯನ್ ಮಾತ್ರ ಬೇಲು ಸಿಗುತ್ತಿಲ್ಲ. ಸದ್ಯ ಬಂಧನದಲ್ಲಿರುವ ಆರ್ಯನ ಖಾನ್ ಮಾನಸಿಕ ನೆಮ್ಮದಿಗಾಗಿ ಶ್ರೀರಾಮನ ಮೊರೆ ಹೋಗಿದ್ದಾನೆ.
ಮುಂಬೈನ್ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ರಾಮ ಮತ್ತು ಸೀತೆಯ ಪುಸ್ತಕ ತರಿಸಿಕೊಂಡು ಓದುತ್ತಿದ್ದಾನೆ ಎಂದು ಜೈಲಾಧಿಕಾರಿ ಹೇಳಿದ್ದಾರೆ.
ಪದೇ ಪದೇ ಜಾಮೀನು ನಿರಾಕರಣೆಗೊಂಡ ಬಳಿಕ ಆರ್ಯನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಹೀಗಾಗಿ ಆತನಿಗೆ ಕೆಲವೊಂದು ಪುಸ್ತಕಗಳನ್ನು ಓದಲು ಸಲಹೆ ನೀಡಿರುವುದಾಗಿ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿರುವ ಗ್ರಂಥಾಲಯದಿಂದ ಕೈದಿಗಳು ಕೇಳಿದ ಪುಸ್ತಕಗಳನ್ನು ನೀಡಲಾಗುತ್ತದೆ. ಇಲ್ಲಿ ಆರ್ಯನ್ ತಮಗೆ ರಾಮ ಹಾಗೂ ಸೀತೆಯ ಪುಸ್ತಕವನ್ನು ನೀಡುವಂತೆ ಕೇಳಿದ್ದರಿಂದ ನೀಡಲಾಗಿದೆ.
PublicNext
25/10/2021 12:11 pm