ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ಕೇಸ್ ನಲ್ಲಿ ದೀಪಿಕಾ ಹೆಸರು : ಶಾಕ್ ಆದ ಇಂದ್ರಜಿತ್!

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಗೂ ಪಸರಿಸಿದ ಡ್ರಗ್ಸ್ ಘಾಟಿನಿಂದ ದಿನಕ್ಕೊಬ್ಬರ ಹೆಸರು ಬಹಿರಂಗವಾಗುತ್ತಿದೆ.

ಸದ್ಯ ಬಾಲಿವುಡ್ ಬೆಡಗಿ, ಗುಳಿಕೆನ್ನೆ ಚಲುವೆ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿಬಂದಿದ್ದಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಶಾಕ್ ಆಗಿದ್ದಾರೆ.

ಈ ಕುರಿತು ಮಾತನಾಡಿರುವ ಇಂದ್ರಜೀತ್ ದೀಪಿಕಾರನ್ನಾ ಚಿತ್ರರಂಗಕ್ಕೆ ಪರಿಚಯಿಸಿದ್ದೇ ನಾನು.

ಅವರನ್ನು ಹತ್ತಿರದಿಂದ ಬಲ್ಲೆನಾದ್ದರಿಂದ ಅವರ ಬಗ್ಗೆ ಈ ಸುದ್ದಿ ಕೇಳಿ ನನಗೆ ನಿಜಕ್ಕೂ ಶಾಕ್ ಮತ್ತು ಸರ್ಪ್ರೈಸ್ ಆಗಿದೆ ಎಂದಿದ್ದಾರೆ.

2006ರಲ್ಲಿ ತೆರೆಕಂಡ ಕನ್ನಡದ 'ಐಶ್ವರ್ಯಾ' ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಅವರನ್ನು ಇಂದ್ರಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಪರಿಚಯಿಸಿದ್ದರು.

ದೀಪಿಕಾರ ತಂದೆ ಪ್ರಕಾಶ್ ಪಡುಕೋಣೆ ಬಗ್ಗೆಯೂ ಇಂದ್ರಜಿತ್ ಗೆ ಚೆನ್ನಾಗಿ ತಿಳಿದಿದೆಯಂತೆ. 'ದೀಪಿಕಾ ತಂದೆ ಶಿಸ್ತಿನ ವ್ಯಕ್ತಿ. ಪಡುಕೋಣೆ ಎಂಬ ಸಣ್ಣ ಗ್ರಾಮದ ಸಂಪ್ರದಾಯಸ್ಥ ಕುಟುಂಬದಿಂದ ಬಂದವರು.

ಹಾಗಾಗಿ ದೀಪಿಕಾ ಅವರ ಬಗ್ಗೆ ಇಂಥ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಜೀವನದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದವರು. ಆದರೆ ಅವರಿಗೆ ಏನಾಯಿತೋ ಗೊತ್ತಿಲ್ಲ' ಎಂದಿದ್ದಾರೆ ಇಂದ್ರಜಿತ್.

ನಾನು ಅವರನ್ನು ಸಮರ್ಥಿಸುತ್ತಿಲ್ಲ. ಕೇಳಿಬಂದ ಆರೋಪ ನಿಜವೇ ಆಗಿದ್ದರೆ ಅವರು ಮಾಡಿದ್ದು ಖಂಡಿತ ತಪ್ಪು.

ಕನ್ನಡ ಚಿತ್ರರಂಗದಿಂದಲೇ ಯಶಸ್ಸಿನ ಹಾದಿ ಹಿಡಿದ ಅವರು ತಮ್ಮ ಮೊದಲ ಸಿನಿಮಾ ಕನ್ನಡದ್ದು ಎಂದು ನಂತರದಲ್ಲಿ ಹೇಳಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಇಂದ್ರಜಿತ್.

Edited By : Nirmala Aralikatti
PublicNext

PublicNext

24/09/2020 03:41 pm

Cinque Terre

124.78 K

Cinque Terre

1