ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.
ಇದರ ಮಧ್ಯೆ ಅಚ್ಚರಿ ಎಂಬಂತೆ ಅವರಿಗೆ ಜಾಮೀನು ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ!
ಸಿಟಿ ಸಿವಿಲ್ ಸೆಷನ್ ಕೋರ್ಟ್ ನ ಜಡ್ಜ್ ಗೆ ಈ ಪತ್ರ ಬರೆಯಲಾಗಿದೆ. 'ಸಂಜನಾ ರಾಗಿಣಿ ಸೇರಿದಂತೆ ಡ್ರಗ್ಸ್ ಕೇಸ್ ನಲ್ಲಿ ಭಾಗಿ ಆಗಿರುವ ಎಲ್ಲರಿಗೂ ಜಾಮೀನು ನೀಡಬೇಕು.
ಕೇಸ್ ನಲ್ಲಿ ಇರುವ ಎಲ್ಲರನ್ನೂ ವಜಾ ಮಾಡಬೇಕು' ಎಂದು ಪತ್ರದಲ್ಲಿ ಹೇಳಲಾಗಿದೆ. ಒಂದು ವೇಳೆ ಹಾಗೆ ಮಾಡದಿದ್ದರೆ ಕಾರಿನಲ್ಲಿ ಬಾಂಬ್ ಇಡುತ್ತೇವೆ ಎಂಬ ಬೆದರಿಕೆ ಹಾಕಲಾಗಿದೆ.
PublicNext
20/10/2020 11:33 am