ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಪರ್ ಬೈಕ್ ಗಳೇ ಇವರ ಟಾರ್ಗೆಟ್ : ಕದ್ದ ಬೈಕ್ ಜಪ್ತಿ ಮಾಡಿದ ಖಾಕಿ ಪಡೆ

ಬೆಂಗಳೂರು : ಇತ್ತಿಚ್ಚಿನ ದಿನಮಾನಗಳಲ್ಲಿ ಸರಗಳತನ,ವಾಹನ ಕಳ್ಳತನ,ಮೊಬೈಲ್ ಕಳ್ಳತನ ಎನ್ನುವುದು ಮನೆಮಾತಂತಾಗಿದೆ.

ಹೌದು ನಗರದ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು ಬರೋಬ್ಬರಿ 139 ಬೈಕ್ ಕಳ್ಳತನದ ಪ್ರಕರಣಗಳನ್ನು ಭೇದಿಸಿ 39 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಖದೀಮರು ಕದ್ದಿದ್ದ 1.60 ಕೋಟಿ ಮೌಲ್ಯದ 174 ಬೈಕ್ ಗಳನ್ನು ಖಾಕಿ ಪಡೆ ವಶಕ್ಕೆ ಪಡೆದಿದೆ.

ಇಂದು ಕಳುವಾಗಿದ್ದ ಬೈಕ್ ಗಳನ್ನು ಪ್ರಾಪರ್ಟಿ ಪರೇಡ್ ನಲ್ಲಿ ಪದರ್ಶಿಸಿದ ಪೊಲೀಸರು ಬೈಕ್ ಗಳನ್ನ ಅವುಗಳ ಮಾಲೀಕರಿಗೆ ಹಸ್ತಾಂತರಿಸಿದರು.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಖುದ್ದು ವಾಹನಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಿದರು.

ಅಂದ ಹಾಗೆ, ಹೆಚ್.ಎಸ್.ಆರ್ ಲೇಔಟ್ ನಲ್ಲಿ 33, ಆಡುಗೋಡಿಯಲ್ಲಿ 13 ಕೇಸ್, ಕೋರಮಂಗಲದಲ್ಲಿ 4, ಬಂಡೇಪಾಳ್ಯದಲ್ಲಿ 34, ಬೇಗೂರಲ್ಲಿ 35 ಕೇಸ್, ಹುಳಿಮಾವುನಲ್ಲಿ 13, ಪರಪ್ಪನ ಅಗ್ರಹಾರದಲ್ಲಿ 3 ಪ್ರಕರಣಗಳು ದಾಖಲಾಗಿದ್ದವು.

ಜೊತೆಗೆ, ಎಲೆಕ್ಟ್ರಾನಿಕ್ ಸಿಟಿಯ 4 ಪ್ರಕರಣಗಳನ್ನು ಸೇರಿದಂತೆ ಎಲ್ಲ ಕೇಸ್ ಗಳನ್ನು ಪೊಲೀಸರು ಭೇದಿಸಿದ್ದಾರೆ.

Edited By : Nirmala Aralikatti
PublicNext

PublicNext

26/11/2020 08:00 pm

Cinque Terre

127.03 K

Cinque Terre

2