ಸಾಮಾನ್ಯವಾಗಿ ದೇವರಿಗೆ ಹಾಲಿನ ಅಭಿಷೇಕ ಮಾಡುವುದು ರೂಢಿ.ಹಾಗೇಯೇ ಫಿಲಂ ಸ್ಟಾರ್ ಗಳ ಕಟೌಟ್ ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡುವುದನ್ನೂ ನೋಡಿರುತ್ತೇವೆ. ಮದುವೆ ಸಂದರ್ಭದಲ್ಲಿ ಮದುಮಕ್ಕಳ ಮೈಮೇಲೆ ಹಾಲು ಎರೆಯುವ ಸಂಪ್ರದಾಯಕ್ಕೂ ನೀವು ಸಾಕ್ಷಿಯಾಗಿರಬಹುದು. ಆದ್ರೆ ಇಲ್ಲೊಬ್ಬ ಕೆಲಸಗಾರ ಹಾಲಿನಲ್ಲಿಯೇ ಸ್ಥಾನ ಮಾಡಿದ್ದಾನೆ.ಆ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು ವಿಡಿಯೋದಲ್ಲಿರುವ ಭೂಪ ಹಾಲಿನ ಟಬ್ ನಲ್ಲೇ ಸ್ನಾನ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.
ಹೌದು ಟರ್ಕಿಯ ಡೈರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಹಾಲಿನ ಟಬ್ ನಲ್ಲೇ ಸ್ನಾನ ಮಾಡಿದ್ದಾನೆ..!
ತಾನು ಕೆಲಸ ಮಾಡುತ್ತಿರುವ ಸಂಸ್ಥೆಯನ್ನೇ ನಂಬಿರುವ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದೇನೆ ಎಂದು ಕಿಂಚಿತ್ತೂ ಯೋಚಿಸದೆ ಈತ ಈ ಕೃತ್ಯವೆಸಗಿದ್ದ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಈತನ ಈ ಪಾಪಕೃತ್ಯವನ್ನು ಅಲ್ಲಿನ ಇನ್ನೋರ್ವ ಸಿಬ್ಬಂದಿ ಸೆರೆ ಹಿಡಿದಿದ್ದಾನೆ.ವೈರಲ್ ಆದ ವಿಡಿಯೋಗೆ ಭಾರೀ ಆಕ್ರೋಶ …
PublicNext
08/11/2020 06:19 pm