ಬೆಂಗಳೂರು: ಬೇರೆಯವರ ಅಕ್ರಮ ಬಯಲು ಮಾಡುವ ಸರ್ಕಾರಿ ಅಧಿಕಾರಿಗಳೇ ಅಕ್ರಮ ವೆಸಗಿದರೆ ಯಾರು ಕೇಳಲ್ಲ ಎಂದುಕೊಂಡವರಿಗೆ ಒಂದಿಲ್ಲೊಂದು ದಿನ ಶಾಕ್ ಆಗಲೇ ಬೇಕು.
ಸದ್ಯ KAS ಅಧಿಕಾರಿ ಸುಧಾ ಅವರಿಗೆ ಆಗಿದ್ದು ಅದೇ ನೋಡಿ, ಈಗಷ್ಟೇ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಬೆನ್ನಲ್ಲೇ ಇದೀಗ ಅವರ ಆಪ್ತರ ಮನೆ ಮೇಲೆ ದಾಳಿ ಮಾಡಲಾಗಿದೆ.
ಸದ್ಯ ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ಮನೆಯಲ್ಲಿ ಸಿಕ್ಕ ದಾಖಲೆ ನೋಡಿ ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ.
ಸುಧಾ ಆಪ್ತೆಯ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫ್ಲ್ಯಾಟ್ ಮೇಲೆ ದಾಳಿ ನಡೆದಿತ್ತು.
ಈ ವೇಳೆ ಫ್ಲ್ಯಾಟ್ ನಲ್ಲಿ ಮೂರೂವರೆ ಕೆ.ಜಿ ಚಿನ್ನ, 7 ಕೆ.ಜಿ ಬೆಳ್ಳಿ, 36 ಲಕ್ಷ ರೂ., ₹250 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ.
ರೇಣುಕಾ ಪತಿ ಚಂದ್ರಶೇಖರ್ ನಿವೃತ್ತ DySPಯಾಗಿದ್ದು, ಪುತ್ರ ಎಇಇ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ರೇಣುಕಾ 4 ಕಂಪನಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ.
ಈ ಕಂಪನಿಯಲ್ಲಿ ಸುಧಾ ಬೇನಾಮಿ ಇದ್ಯಾ ಎಂದು ತನಿಖೆ ಮಾಡಲಾಗುತ್ತಿದೆ.
ಎಸ್ಪಿ ಕುಲ್ ದೀಪ್ ಕುಮಾರ್ ನೇತೃತ್ವದಲ್ಲಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಆ್ಯಂಡ್ ಟೀಂ ನಿಂದ ದಾಳಿ ನಡೆದಿತ್ತು.
PublicNext
08/11/2020 02:47 pm