ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ನೌಕಾನೆಲೆಯಲ್ಲಿ ಸ್ಫೋಟ: ಮೂವರು ಸಿಬ್ಬಂದಿ ಸಾವು

ನವದೆಹಲಿ: ಮುಂಬೈನ ನೌಕಾನೆಲೆಯಲ್ಲಿ ಮಂಗಳವಾರ ಭಾರತೀಯ ನೌಕೆ (ಐಎನ್ಎಸ್) ರಣವೀರ್‌ನಲ್ಲಿ ಸ್ಫೋಟ ಸಂಭವಿಸಿದೆ. ಪರಿಣಾಮ ಮೂವರು ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಒಟ್ಟು ಹನ್ನೊಂದು ಜನ ಸಿಬ್ಬಂದಿ ಗಾಯಗೊಂಡಿದ್ದಾರೆ.

ಐಎನ್ಎಸ್ ರಣವೀರ್ ಹಡಗಿನ ಆಂತರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ನೌಕಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಭಾರತೀಯ ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸ್ಫೋಟ ಸಂಭವಿಸಿದ ತಕ್ಷಣವೇ ಹಡಗಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಬೃಹತ್ ಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.

ಐಎನ್ಎಸ್ ರಣವೀರ್ ಅನ್ನು ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್‌ನಿಂದ ಕ್ರಾಸ್ ಕೋಸ್ಟ್ ಕಾರ್ಯಾಚರಣೆ ನಿಮಿತ್ತ ನಿಯೋಜಿಸಲಾಗಿತ್ತು ಮತ್ತು ಶೀಘ್ರದಲ್ಲೇ ಬೇಸ್ ಪೋರ್ಟ್‌ಗೆ ಮರಳಬೇಕಿತ್ತು. ಅಗ್ನಿ ಅವಘಡದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Edited By : Nagaraj Tulugeri
PublicNext

PublicNext

19/01/2022 07:24 am

Cinque Terre

74.28 K

Cinque Terre

2