ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಯಾ ಕಮಾಂಡರ್​​​​ನಿಂದ ಸುನ್ನಿ ಯುವತಿ ಮೇಲೆ ಅತ್ಯಾಚಾರ; ಪೊಲೀಸರಿಂದ ಗುಂಡಿನ ದಾಳಿ, 36 ಜನ ದುರ್ಮರಣ

ಇರಾನ್​​ನಲ್ಲಿ ಶಿಯಾ ಕಮಾಂಡರ್​​​​ನಿಂದ ಸುನ್ನಿ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಅತ್ಯಾಚಾರ ಖಂಡಿಸಿ ಸುನ್ನಿ ಸಮುದಾಯ ಬೃಹತ್ ಪ್ರತಿಭಟನೆ ನಡೆದಿದೆ. ಸರ್ಕಾರಿ ಕಚೇರಿ, ಪೊಲೀಸ್​ ಠಾಣೆಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್ ನಡೆದಿದೆ. ಪೊಲೀಸರ ಗುಂಡಿನ ದಾಳಿಗೆ 36 ಜನರು ಆಹುತಿಯಾಗಿದ್ದಾರೆ.

ಗುಂಡಿನ ದಾಳಿಯಲ್ಲಿ 36 ಜನ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಕಮಾಂಡರ್​ ಇಬ್ರಾಹಿಂ ಖುಚಾಕಜಾಯಿ ಎಂಬಾತ 15 ವರ್ಷದ ಬಾಲಕಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರವೆಸಗಿದ್ದ ಎನ್ನಲಾಗ್ತಿದೆ.

ಕಳೆದ ವಾರ ಪೊಲೀಸ್ ಕಮಾಂಡರ್ 15 ವರ್ಷದ ಬಲೂಚ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಇರಾನ್‌ನ ಪ್ರಮುಖ ಸುನ್ನಿ ಧರ್ಮಗುರು ಮೌಲ್ವಿ ಅಬ್ದುಲ್ ಹಮೀದ್ ಕೂಡ ಬಾಲಕಿಯ ಅತ್ಯಾಚಾರವನ್ನು ಖಚಿತಪಡಿಸಿದ್ದಾರೆ. ಸುನ್ನಿ ಬಲೂಚ್ ಜನಸಂಖ್ಯೆಯು ಇರಾನ್‌ನ ಆಗ್ನೇಯ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ವಾಸಿಸುತ್ತಿದೆ.

ಪೊಲೀಸ್ ಕಮಾಂಡರ್ ಕರ್ನಲ್ ಇಬ್ರಾಹಿಂ ಖುಚಕ್ಜೈ ಅವರು ಸೆಪ್ಟೆಂಬರ್ 1 ರಂದು ಚಬಹಾರ್‌ನಲ್ಲಿ ನಡೆದ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ಅತ್ಯಾಚಾರಕ್ಕೆ ಒಳಗಾದ ಹುಡುಗಿಯು ನೆರೆಹೊರೆಯವರ ಮಗಳು. ಕಮಾಂಡರ್ ಈ ಹುಡುಗಿಯನ್ನು ವಿಚಾರಣೆಗಾಗಿ ಕಚೇರಿಗೆ ಕರೆದು ಅಲ್ಲಿ ಆಕೆಯ (Baloch Girl Rape Case in Zahedan) ಮೇಲೆ ಅತ್ಯಾಚಾರವೆಸಗಿದ್ದಾನೆ.

ಇರಾನ್ ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಸೆಪ್ಟೆಂಬರ್ 1 ನಡೆದಿದೆ. ಮನೆಗೆ ಹಿಂದಿರುಗಿದ ಹುಡುಗಿ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ವಿಷಯವನ್ನು ನಿಯಂತ್ರಿಸಲು, ಭದ್ರತಾ ಪಡೆಗಳು ಹುಡುಗಿಯ ಮೂವರು ಸಂಬಂಧಿಕರನ್ನು ಅಪಹರಿಸಿದರು ಮತ್ತು ಬಾಲಕಿಗೆ ಏನೂ ಆಗಿಲ್ಲ ಎಂದು ಹೇಳಿಕೆ ನೀಡುವಂತೆ ಕುಟುಂಬಕ್ಕೆ ಒತ್ತಾಯಿಸಿದರು.

ದೂರು ದಾಖಲಿಸಿಕೊಳ್ಳದಂತೆ ಸಂತ್ರಸ್ತ ಕುಟುಂಬದ ಮೇಲೂ ಒತ್ತಡ ಹೇರಲಾಗಿತ್ತು. ಆದರೆ, ಭಾರೀ ಒತ್ತಡದ ನಡುವೆಯೂ ಸಂತ್ರಸ್ತೆಯ ಕುಟುಂಬ ಅತ್ಯಾಚಾರದ ಆರೋಪವನ್ನು ಕೈಬಿಡಲಿಲ್ಲ.

Edited By : Abhishek Kamoji
PublicNext

PublicNext

01/10/2022 06:20 pm

Cinque Terre

78.69 K

Cinque Terre

7