ಮಾಸ್ಕೊ: ರಷ್ಯಾ ಮೂಲದ ಲುಕೋಯಿಲ್ ಸಂಸ್ಥೆಯ ಮಾಜಿ ವ್ಯವಸ್ಥಾಪಕ ಅಲೆಕ್ಸಾಂಡರ್ ಸಬೋಟಿನ್ ನಿಧನರಾಗಿದ್ದಾರೆ.
ಅಲೆಕ್ಸಾಂಡರ್ ಅವರ ಈ ಸಾವು ನಿಗೂಢ ಎನ್ನಲಾಗಿದೆ. ಸಂಸ್ಥೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದವರಲ್ಲಿ ಅಲೆಕ್ಸಾಂಡರ್ ಎರಡನೆಯವರು ಎನ್ನಲಾಗಿದೆ. ಸ್ಥಳೀಯ ದಿನಪತ್ರಿಕೆಗಳು ವರದಿ ಮಾಡಿದ ಪ್ರಕಾರ ಮಾಸ್ಕೋ ಬಳಿಯ ಮೈಟಿಸ್ಕಿ ನಗರದಲ್ಲಿ ಶಾಮನ್ ಅವರೊಂದಿಗೆ ನಡೆದ ಸಭೆಯ ನಂತರ ಅಲೆಕ್ಸಾಂಡರ್ ನಿಧನರಾಗಿದ್ದಾರೆ.
ಮೃತ ಅಲೆಕ್ಸಾಂಡರ್ ಅವರು, ಕಚ್ಚಾ ತೈಲ ಮಾರಾಟ ಹಾಗೂ ಪೂರೈಕೆ ಸಂಸ್ಥೆಯಾದ ಲುಕೋಯಿಲ್‌ನ ಉಪಾಧ್ಯಕ್ಷ ವ್ಯಾಲೆರಿ ಸುಬೋಟಿನ್ ಅವರ ಸಹೋದರರಾಗಿದ್ದಾರೆ.
PublicNext
02/09/2022 06:50 pm