ಖಾಮಿಸ್ ಮುಶಾಇತ್(ಸೌದಿ): ಹಾಸ್ಟೆಲ್‌ನಲ್ಲಿ ಸೌಕರ್ಯ ನೀಡಲು ಒತ್ತಾಯಿಸಿ ನಿರಶನ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಪೊಲೀಸರೇ ಹಲ್ಲೆ ನಡೆಸಿದ್ದಾರೆ.
ಸೌದಿ ಅರೇಬಿಯಾದ ಖಾಮಿಸ್ ಮುಶಾಇತ್ ನಗರದ ವಿದ್ಯಾರ್ಥಿ ನಿಲಯವೊಂದರಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯರ ಮೇಲೆ ಸ್ಥಳೀಯ ಮೂಲಭೂತವಾದಿ ಗುಂಪೊಂದು ಹಲ್ಲೆ ಮಾಡಿದೆ. ಅಲ್ಲಿನ ಪೊಲೀಸರು ಕೂಡ ಈ ಅಮಾನವೀಯ ಕೃತ್ಯಕ್ಕೆ ಸಾಥ್ ನೀಡಿದ್ದಾರೆ.
ಓರ್ವ ವಿದ್ಯಾರ್ಥಿನಿಯನ್ನು ಎಳೆದಾಡಿದ ಮೂಲಭೂತವಾದಿ ಗುಂಪು ಆಕೆಯ ಕಾಲುಗಳನ್ನು ಕಟ್ಟಿ ಹಾಕಿದ್ದಾರೆ. ನಂತರ ಅಲ್ಲಿದ್ದ ಪೊಲೀಸನೊಬ್ಬ ಬೆಲ್ಟ್‌ನಿಂದ ವಿದ್ಯಾರ್ಥಿನಿಗೆ ಹೊಡೆದಿದ್ದಾನೆ. ಈ ಎಲ್ಲ ಘಟನೆಯನ್ನು ಒಳಗೊಂಡ ದೃಶ್ಯ ಈಗ ವೈರಲ್ ಆಗುತ್ತಿದ್ದು ನೋಡಿದ ನೆಟ್ಟಿಗರು ಸೌದಿ ಪೊಲೀಸರ ಮೇಲೆ ಆಕ್ರೋಶಿತರಾಗಿದ್ದಾರೆ.
PublicNext
02/09/2022 04:56 pm