ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಕ್ರೇನ್​ನಿಂದ ಕಳಚಿ ಬಿದ್ದ ಕ್ಲೋರಿನ್​ ಟ್ಯಾಂಕ್; ಭಾರಿ ಸ್ಫೋಟದಲ್ಲಿ 12 ಮಂದಿ ಸಾವು

ಅಮ್ಮಾನ್​: ಹಡಗಿಗೆ ಭರ್ತಿ ಮಾಡಲಾಗುತ್ತಿದ್ದ ಕ್ಲೋರಿನ್​ ಟ್ಯಾಂಕ್ ಕ್ರೇನ್‌ನಿಂದ ಕಳಚಿ ಬಿದ್ದು ಸ್ಫೋಟಗೊಂಡು 12 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಾರ್ಡನ್​ನಲ್ಲಿ ನಡೆದಿದೆ.

ಈ ಅವಘಡದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಾನಿಲ ಸೋರಿಕೆಯ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸೋಮವಾರ ಜಾರ್ಡನ್​ನ ಅಖಾಬಾ ಬಂದರಿನಲ್ಲಿ ಕ್ರೇನ್​ ಒಂದು ಕ್ಲೋರಿನ್​ ಟ್ಯಾಂಕ್​ಗಳನ್ನು ಹಡಗಿಗೆ ಭರ್ತಿ ಮಾಡುತ್ತಿತ್ತು. ಈ ವೇಳೆ ಕ್ರೇನ್​ನಿಂದ ಆಕಸ್ಮಿಕ ಟ್ಯಾಂಕ್​ ಒಂದು ಕೆಳಗೆ ಬಿದ್ದಿದೆ. ಪರಿಣಾಮ ಹಳದಿ ಬಣ್ಣದ ವಿಷಾನಿಲ ಸ್ಫೋಟಗೊಂಡಿದ್ದು, ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 250ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ.

Edited By : Vijay Kumar
PublicNext

PublicNext

28/06/2022 06:38 pm

Cinque Terre

67.09 K

Cinque Terre

0