ಹೈದರಾಬಾದ್: ತೆಲಂಗಾಣ ಮೂಲದ ಸಾಫ್ಟವೇರ್ ಇಂಜಿನಿಯರ್ ಒಬ್ಬರನ್ನು ಅಮೆರಿಕದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ತೆಲಂಗಾಣದ ನಲ್ಗೊಂಡಾ ಜಿಲ್ಲೆಯ ಸಾಯಿ ಚರಣ್ (26) ಎಂಬುವರು ಭಾನುವಾರ ಬೆಳಗಿನ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತನೊಬ್ಬ ಅವರಿಗೆ ಗುಂಡಿಕ್ಕಿ ಪರಾರಿಯಾಗಿದ್ದಾನೆ.
ಸಾಯಿ ಚರಣ್ ಉನ್ನತ ವಿದ್ಯಾಭ್ಯಾಸಕ್ಕಾಗಿ ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಎಂಎಸ್ ಪದವಿ ಶಿಕ್ಷಣ ಮುಗಿಸಿದ ನಂತರ ಕಳೆದ ಆರು ತಿಂಗಳಿಂದ ಅವರು ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸಾಯಿ ಚರಣ್ ಕೆಲ ದಿನಗಳ ಹಿಂದಷ್ಟೇ ಹೊಸ ಕಾರು ಖರೀದಿಸಿದ್ದರು. ಬೆಳಗಿನ ವಾಕ್ ಮಾಡುವಾಗ ಅವರಿಗೆ ಗುಂಡಿಕ್ಕಲಾಗಿದೆ ಎಂದು ಮೃತರ ತಂದೆ ತಿಳಿಸಿದ್ದಾರೆ.
PublicNext
22/06/2022 04:14 pm