ಇಸ್ಲಾಮಾಬಾದ್: ಮೂವರು ಹೆಣ್ಣು ಮಕ್ಕಳಿರುವ ಆ ಗರ್ಭಿಣಿ ಈ ಸಲ ತನಗೆ ಗಂಡು ಮಗು ಬೇಕೆಂದು ದೇವರಿಗೆ ಮೊರೆ ಇಟ್ಟು ಹಣೆಗೆ ಮೊಳೆ ಹೊಡೆದುಕೊಂಡಿದ್ದಾಳೆ. ಮೌಢ್ಯದ ಪರಮಾವಧಿ ಎಂದೇ ಹೇಳಬೇಕಾದ ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ವೈದ್ಯ ಹೈದರ್ ಖಾನ್ ಅವರು ಈ ಮಾಹಿತಿಯನ್ನು ದೃಧಪಡಿಸಿದ್ದಾರೆ.
ಮಹಿಳೆಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ. ಆದರೆ ಅತಿಯಾದ ನೋವಿನಿಂದಾಗಿ ಅವರು ಆಸ್ಪತ್ರೆಗೆ ಬಂದಿದ್ದರು. ಈಕೆಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಈಗ ಮತ್ತೆ ಗರ್ಭಿಣಿಯಾಗಿದ್ದು, ಅದು ಕೂಡ ಹೆಣ್ಣು ಎಂದು ವೈದ್ಯರು ಹೇಳಿದ್ದಾರೆ. ಎಕ್ಸರೇ ತೆಗೆದು ನೋಡಿದಾಗ ಸುಮಾರು 2 ಇಂಚಿನ ಸಣ್ಣ ಮೊಳೆಗಳನ್ನು ಹಣೆಗೆ ಹೊಡೆದುಕೊಂಡಿದ್ದಾರೆ. ಅದೃಷ್ಟವಶಾತ್, ಮಹಿಳೆಯ ಮಿದುಳಿಗೆ ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೇಶಾವರ ಪೊಲೀಸರು, ಗರ್ಭಿಣಿಗೆ ಈ ಸಲಹೆ ಕೊಟ್ಟ ಮಾಂತ್ರಿಕನ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹಾಗೂ ಗರ್ಭಿಣಿಯನ್ನು ವಿಚಾರಣೆಗೆ ಒಳಪಡಿಸಲಿದ್ದೇವೆ ಎಂದಿದ್ದಾರೆ.
PublicNext
09/02/2022 07:03 pm