ಹೊಸದಿಲ್ಲಿ: ಸೋಶಿಯಲ್ ಮೀಡಿಯಾಗಳ ಮೂಲಕ ಭಾರತದಲ್ಲಿ ಐಸಿಸ್ ಉಗ್ರರು ತಮ್ಮ ಸಿದ್ಧಾಂತ ಹರಡಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ದೇಶದಲ್ಲಿ ಐಸಿಸ್‌ನಿಂದ ಪ್ರಚೋದನೆಗೊಂಡು ದಾಳಿಗೆ ಸಂಚು ರೂಪಿಸಿದ 37 ಪ್ರಕರಣಗಳಲ್ಲಿ 168 ಜನರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.
ದೇಶಾದ್ಯಂತ ಐಸಿಸ್ ತನ್ನ ಸಿದ್ಧಾಂತ ಪಸರಿಸಲು ಯತ್ನಿಸುತ್ತಿದ್ದು, ಇದಕ್ಕಾಗಿ ಯುವಕರನ್ನು ಬಳಸಿಕೊಳ್ಳುತ್ತಿದೆ. ಹಾಗಾಗಿಯೇ ಹಲವರು ಐಸಿಸ್‌ನಿಂದ ಪ್ರಚೋದನೆಗೊಂಡು ದಾಳಿಗೆ ಸಂಚು ರೂಪಿಸುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಇದುವರೆಗೆ 31 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಕಳೆದ ಜೂನ್‌ನಲ್ಲಿಯೇ ಒಂದು ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಜತೆಗೆ 27 ಜನರ ವಿರುದ್ಧ ವಿಚಾರಣೆ ನಡೆದು, ಅವರು ಅಪರಾಧಿಗಳು ಎಂಬುದು ಸಹ ಸಾಬೀತಾಗಿದೆ ಎಂದು ಮಾಹಿತಿ ನೀಡಿದೆ.
PublicNext
18/09/2021 07:44 am