ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನುಷ್ಯತ್ವ ಮರೆತ ತಾಲಿಬಾನ್ ಉಗ್ರರು : ಶರಣಾದ ಪೊಲೀಸ್ ಮುಖ್ಯಸ್ಥನನ್ನು ಕೈಕಾಲು ಕಟ್ಟಿ ಗುಂಡಿಕ್ಕಿ ಕೊಂದರು!

ಕಾಬೂಲ್ : ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿನ ದೃಶ್ಯ ಮೈ ನಡುಗುವಂತಿವೆ ಉಗ್ರರ ಅಟ್ಟಹಾಸಕ್ಕೆ ಜನ ದೇಶ ತೊರೆಯುತ್ತಿದ್ದಾರೆ.

ಪಾಪಿಗಳ ಕೈಯಿಂದ ಮಕ್ಕಳಾದರೂ ಉಳಿಯಲಿ ಎಂದು ಹೆತ್ತ ಮಕ್ಕಳನ್ನು ಸೈನಿಕರ ಕೈ ಸೇರಿಸುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ. ಇದರ ಮಧ್ಯೆ ತಾಲಿಬಾನಿಗಳು ತಾವು ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಅಫ್ಘಾನ್ ಯೋಧರು, ಪೊಲೀಸರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭೀಕರತೆ ಸೃಷ್ಟಿಸುತ್ತಿದ್ದಾರೆ.

ಅಫ್ಘಾನಿಸ್ತಾನದ ಹೆರಾತ್ ಬಳಿಯ ಬದ್ಘಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಹಾಜಿ ಮುಲ್ಲಾರನ್ನು ಸೆರೆಹಿಡಿದಿದ್ದ ತಾಲಿಬಾನಿಗಳು ಮುಖ್ಯಸ್ಥನ ಕೈಕಾಲು, ಕಣ್ಣಿಗೆ ಬಟ್ಟೆ ಕಟ್ಟಿ ಮಂಡಿ ಮೇಲೆ ಕೂರಿಸಿ ಗುಂಡಿನ ಮಳೆ ಸುರಿಸಿದ್ದಾರೆ..

ವರದಿಗಳ ಪ್ರಕಾರ, ಕಳೆದ ವಾರದ ಕೊನೆಯಲ್ಲಿ ತುರ್ಕಮೆನಿಸ್ತಾನ್ ಗಡಿಯ ಬಳಿ ತಾಲಿಬಾನ್ ಮಿಂಚಿನ ವೇಗದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡಿತು. ಇದೇ ವೇಳೆ ಬದ್ಘಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರನ್ನು ಬಂಧಿಸಿತ್ತು.

ತಾಲಿಬಾನ್ ತನ್ನನ್ನು ಸುತ್ತುವರಿದಿದ್ದರಿಂದ ಮುಲ್ಲಾಗೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ವಾಜಿರಿ ಪ್ರಕಟಣೆಗೆ ತಿಳಿಸಿದರು.

Edited By : Manjunath H D
PublicNext

PublicNext

21/08/2021 12:59 pm

Cinque Terre

115.24 K

Cinque Terre

12

ಸಂಬಂಧಿತ ಸುದ್ದಿ