ಇಸ್ಲಾಮಾಬಾದ್: ಐವರು ಕಾಮುಕರು ಮೇಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಪಾಕಿಸ್ತಾನದ ಒಕ್ರಾದಲ್ಲಿ ನಡೆದಿದೆ.
ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ನೆಟ್ಟಿಗರು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತರಾಟೆ ತೆಗೆದುಕೊಂಡರೆ, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಆಗಿದ್ದೇನು?: ವದರಿಗಳ ಪ್ರಕಾರ ಒಕ್ರಾದಲ್ಲಿ ಐವರು ಕಾಮುಕರು ಮೇಕೆಯ ಮೇಲೆ ಅತ್ಯಾಚಾರ ಎಸಗಿ, ಕಿರುಕುಳ ನೀಡಿ ಕೊನೆಗೆ ಅದನ್ನು ಹತ್ಯೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಕಾಮುಕರು ಪರಾರಿಯಾದದ್ದನ್ನು ಸ್ಥಳೀಯರು ನೋಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆಯಿಂದ ಪಾಕಿಸ್ತಾನದಲ್ಲಿ ಜನರ ಆಕ್ರೋಶ ತೀವ್ರವಾಗಿದೆ.
"ಮೇಕೆಯು ಕೂಡ ತನ್ನ ನೋಟದಲ್ಲಿ ಸಾಧಾರಣವಾಗಿರಬೇಕಿತ್ತೇ?" ಎಂದು ಕೆಲವರು ಪ್ರಶ್ನಿಸಿದರೆ, ಪಾಕಿಸ್ತಾನದ ನಟಿ ಮಥಿರಾ, "ಪ್ರಾಣಿಗಳು ಸಹ ಬುರ್ಖಾ ಧರಿಸುವ ಅಗತ್ಯವಿದೆ" ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕುಟುಕಿದ್ದಾರೆ.
"ಬೆತ್ತಲೆ ಪ್ರಾಣಿಗಳು ಸಹ ಪುರುಷರ ಮೇಲೆ ಪ್ರಭಾವ ಬೀರುತ್ತದೆಯೇ? ಇದೀಗ ನಮ್ಮ ಹ್ಯಾಂಡ್ಸಮ್ ಪ್ರಧಾನಿ ಸಹ ಸಂಪೂರ್ಣ ಮುಚ್ಚಿಕೊಳ್ಳುವಂತೆ ಮೇಕೆಗಳನ್ನು ಸಹ ಕೇಳುತ್ತಾರೆ. ಏಕೆಂದರೆ ಕೆಲ ಅಮಾಯಕರು ಅದರಿಂದ ಪ್ರಚೋದನೆಗೆ ಒಳಗಾಗಬಹುದು" ಎಂದು ನೆಟ್ಟಿಗರೊಬ್ಬರು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
PublicNext
30/07/2021 03:52 pm