ಬೈರುತ್: ಬ್ಯಾಂಕ್‌ನಲ್ಲಿ ಇಟ್ಟಿದ್ದ ಠೇವಣಿ ಹಣ ಕೊಡಲು ಬ್ಯಾಂಕ್ ಸಿಬ್ಬಂದಿ ಹಲವು ಬಾರಿ ಎಡತಾಕಿಸಿದ್ದಾರೆ. ಇದರಿಂದ ಆಕ್ರೋಶಿತನಾದ ಖಾತೆದಾರ ಶಸ್ತ್ರಸಜ್ಜಿತನಾಗಿ ಬ್ಯಾಂಕ್‌ಗೆ ಬಂದು ಅಧಿಕಾರಿಗಳನ್ನು ಕೂಡಿ ಹಾಕಿದ್ದಾನೆ.
ಲೆಬನಾನ್ ದೇಶದ ಬೈರುತ್ ಪಟ್ಟಣದಲ್ಲಿ ಈ ಘಟನೆ ಇತ್ತೀಚೆಗಷ್ಟೇ ನಡೆದಿದೆ. ಲೆಬನಾನ್ ದೇಶಾದ ಪ್ರಮುಖ ಬ್ಯಾಂಕ್ ಒಂದರಲ್ಲಿ ಈತ $210,000 ಡಾಲರ್ ಹಣ (1,67,22,300 ರೂ.) ಠೇವಣಿ ಮಾಡಿದ್ದಾನೆ. ಆದ್ರೆ ಈತನ ಠೇವಣಿ ಹಣ ವಾಪಸ್ ಕೊಡಲು ಬ್ಯಾಂಕ್‌ನವರು ಹಲವು ಬಾರಿ ಅಡ್ಡಾಡಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಆತ ಶಸ್ತ್ರಸಜ್ಜಿತನಾಗಿ ಬ್ಯಾಂಕ್‌ಗೆ ಬಂದು ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಂದೆಡೆ ಕೂಡಿ ಹಾಕಿ ಭಯದ ವಾತಾವರಣ ಸೃಷ್ಟಿಸಿದ್ದಾನೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. 2019ರ ಬಿಕ್ಕಟ್ಟಿನ ನಂತರ ಲೆಬನಾನ್ ನಾಗರಿಕರು ಬ್ಯಾಂಕ್‌ನಲ್ಲಿನ ತಮ್ಮ ಠೇವಣಿ ಹಣ ವಾಪಸ್ ಪಡೆಯುವುದು ಕಷ್ಟಕರವಾಗಿದೆ ಎಂದು ವರದಿಗಳು ತಿಳಿಸಿವೆ.
PublicNext
13/08/2022 01:07 pm